Connect with us

    DAKSHINA KANNADA

    “ಕಟೀಲು ತಾಯಿಯ ಸಾನಿಧ್ಯಕ್ಕೆ ಬಂದಾಗ ಒಂದು ರೀತಿಯ ನೆಮ್ಮದಿ ಸಿಗುತ್ತೆ”: ನಟಿ ರಕ್ಷಿತಾ ಪ್ರೇಮ್

    ಕಟೀಲು : ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಅವರು ಭೇಟಿ ತಾಯಿ ದೇವಿಯ ಆಶೀರ್ವಾದ ಪಡೆದುಕೊಂಡರು.

    ಲಲಿತಾ ಪಂಚಮಿಯ ಶುಭದಿನದಂದು ಕಟೀಲು ದೇವಳಕ್ಕೆ ಆಗಮಿಸಿದ ರಕ್ಷಿತಾ ಶ್ರೀ ದೇವಿಗೆ ಸೀರೆ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ನಟಿ ರಕ್ಷಿತಾ ಪ್ರೇಮ್ ಅವರನ್ನು ಗೌರವಿಸಲಾಯಿತು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಕ್ಷಿತಾ, ‘ಮುಂದಿನ ತಿಂಗಳಿನಿಂದ ಹೊಸ ಸಿನಿಮಾ ಆರಂಭಿಸುವ ನಿರೀಕ್ಷೆ ಇದೆ. ನನ್ನ ಪತಿ ಪ್ರೇಮ್ ಅವರು ದರ್ಶನ್ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದು ಮುಂದಿನ ವರ್ಷದ ಮೇ ತಿಂಗಳಲ್ಲಿ ಶುರುವಾಗುವ ನೀರಿಕ್ಷೆ ಇದೆ. ಕಟೀಲು ಶ್ರೀದೇವಿ ಅನುಗ್ರಹವಿಲ್ಲದೆ ಯಾವುದೇ ಕಾರ್ಯಗಳು ಸಿದ್ಧಿಯಾಗುವುದಿಲ್ಲ. ನನಗೆ ಕಟೀಲಿಗೆ ಬಂದಾಗೆಲ್ಲ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಲಲಿತಾ ಪಂಚಮಿಯ ನವರಾತ್ರಿಯ ಈ ಶುಭದಿನದಂದು ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಭಕ್ತಾದಿಗಳು ಉಪಸ್ಥಿತರಿದ್ದರು. ಅಂದಹಾಗೆ, ಈ ತಿಂಗಳಲ್ಲಿ ಎರಡನೇ ಬಾರಿಗೆ ನಟಿ ರಕ್ಷಿತಾ ಪ್ರೇಮ್ ಅವರು ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *