FILM
ಆಂಟೊನಿ ತಟ್ಟಿಲ್ ಜೊತೆ ಹಸೆಮಣೆ ಏರಿದ ಖ್ಯಾತ ನಟಿ ಕೀರ್ತಿ ಸುರೇಶ್
ಗೋವಾ ಡಿಸೆಂಬರ್ 12: ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಗೆಳೆಯ ಆಂಟೊನಿ ತಟ್ಟಿಲ್ ಜೊತೆ ಅವರು ಹಸೆಮಣೆ ಏರಿದ್ದಾರೆ.
ದಕ್ಷಿಣ ಭಾರತದ ಸಂಪ್ರದಾಯದ ರೀತಿ ಕೀರ್ತಿ ಸುರೇಶ್ ಅವರ ಮದುವೆ ಗೋವಾದಲ್ಲಿ ಇಂದು ನಡೆದಿದೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ಅವರು ಮದುವೆ ಆಗಿದ್ದಾರೆ.
ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ‘ಮಹಾನಟಿ’ ಕೀರ್ತಿ ಸುರೇಶ್ಗೆ ಅಭಿನಂದನೆ ತಿಳಿಸುತ್ತಿದ್ದಾರೆ.
Continue Reading