Connect with us

    FILM

    ಹಿರಿಯ ನಟ ಶಿವರಾಂ ಸ್ಥಿತಿ ಗಂಭೀರ – ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ…!!

    ಬೆಂಗಳೂರು ಡಿಸೆಂಬರ್ 4: ಅಪಘಾತದಿಂದಾಗಿ ಮೆದುಳಿಗೆ ಹಾನಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನ್ನಡದ ಹಿರಿಯ ನಟ ಶಿವರಾಂ ಅವರು ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.


    ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯರು ಮಿದುಳಿಗೆ ಮತ್ತಷ್ಟು ಹಾನಿಯಾಗಿದ್ದು, ರಕ್ತದೊತ್ತಡ ಹೆಚ್ಚಾಗಿದೆ. ವೆಂಟಿಲೇಟರ್‌ನಲ್ಲೇ ಶಿವರಾಂ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಮೂತ್ರಪಿಂಡ, ಪಿತ್ತಕೋಶ ಎಲ್ಲವೂ ಕಾರ್ಯನಿರ್ವಹಿಸುತ್ತಿವೆ ಆದರೆ ಹೃದಯ ಸ್ಪಂದಿಸುತ್ತಿಲ್ಲ. ಅವರು ತುಂಬ ಸಮಯ ನಮ್ಮೊಂದಿಗೆ ಇರುತ್ತಾರೆ ಎನ್ನುವುದು ಅನುಮಾನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಜೀವರಕ್ಷಕದ ನೆರವು ಹೆಚ್ಚಿಸಿದ್ದೇವೆ. ತುಂಬಾ ಹಿಂಸೆ ಮಾಡಬೇಡಿ ಎಂದು ಕುಟುಂಬದವರು ಹೇಳಿದ್ದಾರೆ. ಉಳಿಸಿಕೊಳ್ಳಲು ನೋಡಿ ಎನ್ನುತ್ತಿದ್ದಾರೆ. ಶ್ವಾಸಕೋಶದಲ್ಲಿ ನೀರು ತುಂಬುತ್ತಿದೆ. ಮಿದುಳಿನ ಜೊತೆ ಇತರೆ ಅಂಗಾಂಗಗಳೂ ನಿಷ್ಕ್ರಿಯಗೊಳ್ಳುತ್ತಿವೆ’ ಎಂದು ವೈದ್ಯರು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *