ಬೆಂಗಳೂರು ಅಕ್ಟೋಬರ್ 17: ಬಿಗ್ ಬಾಸ್ ನಲ್ಲಿ ರಕ್ಷಿತಾ ಶೆಟ್ಟಿ ವಿರುದ್ದ ಜಾಹ್ನವಿ ಮತ್ತು ಅಶ್ವಿನಿಗೌಡ ಟಾರ್ಗೆಟ್ ಮಾಡುತ್ತಿದ್ದಾರೆ. ರಕ್ಷಿತಾ ವಿರುದ್ದ ನಾಗವಲ್ಲಿ ಕಥೆ ಕಟ್ಟಿ ಇಡೀ ಮನೆಯನ್ನು ನಂಬಿಸಿದ್ದರು. ಇದೀಗ ಕಲರ್ಸ್ ಕನ್ನಡದ ಪ್ರೋಮೋ ದಲ್ಲಿ ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿ ವಿರುದ್ದ ಕೂಗಾಡಿದ್ದು, ಈ ವೇಳೆ ನೀನು ಎಲ್ಲಿಂದ ಬಂದಿದ್ಯಾ ಅಂತ ಗೊತ್ತು. ನೋಡಿದ್ರೆ ಗೊತ್ತಾಗುತ್ತೆ ಎಂದು ಅವಾಜ್ ಹಾಕಿದ್ದಾರೆ.

ಇದೀಗ ‘ಬಿಗ್ ಬಾಸ್’ ಮನೆಯಲ್ಲಿ ಜಾಹ್ನವಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಜೋರು ಜೋರು ಗಲಾಟೆ ನಡೆದಿದೆ. “ಚೈಲ್ಡ್ ಅಂತ ಅಂದುಕೊಂಡಿದ್ಯಾ ನನ್ನನ್ನ? ನನಗೇನು ಮೆಕ್ಯೂರಿಟಿ ಇಲ್ವಾ?” ಅಂತ ಜಾಹ್ನವಿ ಕೇಳಿದ್ದಕ್ಕೆ, “ನೀವು ಚೈಲ್ಡ್. ದೊಡ್ಡ ನಾಗವಲ್ಲಿ ನೀವೇ.. ಗೆಜ್ಜೆ ಸದ್ದು ಮಾಡ್ತಿರೋದು ಇವರಿಬ್ಬರೇ” ಅಂತ್ತೇಳಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಮಾಡಿದ ಹೈಡ್ರಾಮಾವನ್ನ ರಕ್ಷಿತಾ ಶೆಟ್ಟಿ ಬಯಲು ಮಾಡಿದ್ದಾರೆ. ಇದೇ ವೇಳೆ, “ಜಾಸ್ತಿ ಮಾತಾಡಬೇಡ, ಮುಸ್ಕೊಂಡ್ ಮಲಕೋ.. ಹೋಗಿ ನಿನ್ನ ಡ್ರಾಮಾನೆಲ್ಲಾ ಬಾತ್ರೂಮ್ನಲ್ಲಿ ಮಾಡು.. ಈಡಿಯೆಟ್” ಅಂತ ರಕ್ಷಿತಾ ಶೆಟ್ಟಿ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಅಶ್ವಿನಿ ಗೌಡ. “ನಾನು 100 ಬಾರಿ ಹೋಗ್ತಿನಿ.. ನಿಮಗೇನು? ನಿಮ್ಮ ಮನೆಯ ವಾಶ್ರೂಮಾ?” ಅಂತ ರಕ್ಷಿತಾ ಶೆಟ್ಟಿ ತಿರುಗೇಟು ಕೊಟ್ಟಿದ್ದಕ್ಕೆ “ನೀನು ಎಲ್ಲಿಂದ ಬಂದಿದ್ಯಾ ಅಂತ ಗೊತ್ತು.. ನೋಡಿದ್ರೆ ಗೊತ್ತಾಗುತ್ತೆ” ಅಂತ ಸೂಟ್ಕೇಸ್, ಬಟ್ಟೆಗಳತ್ತ ಬೆಟ್ಟು ಮಾಡಿ ತೋರಿಸಿದ್ದಾರೆ ಅಶ್ವಿನಿ ಗೌಡ. ಇದೆಲ್ಲವೂ ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.
ಇನ್ನು ಈ ವಿಡಿಯೋ ವಿರುದ್ದ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಶ್ವಿನಿ ಗೌಡ ಕರಾವಳಿಯ ಹುಡುಗಿ ವಿರುದ್ದ ಪ್ರಾದೇಶಿಕ ಹಿನ್ನಲೆ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಶ್ವಿನಿ ಗೌಡ ಅವರಿಗೆ ದುರಂಹಕಾರ ಜಾಸ್ತಿ ಆಗಿದೆ ಎಂದಿದ್ದಾರೆ.