FILM
ಎರಡನೇ ಪತ್ನಿಗೂ ವಿಚ್ಛೇದನ ನೀಡಿದ ಬಾಲಿವುಡ್ ನಟ ಅಮೀರ್ ಖಾನ್….!!
ಮುಂಬೈ : ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಎರಡನೇ ಡೈವೋರ್ಸ್ ಪಡೆದಿದ್ದಾರೆ. ಫೇಮಸ್ ಸೆಲೆಬ್ರಿಟಿ ಜೋಡಿ ಅಮೀರ್ ಖಾನ್ ಮತ್ತೆ ಕಿರಣ್ ರಾವ್ ತಮ್ಮ ವಿಚ್ಛೇದನೆಯನ್ನು ಘೋಷಿಸಿದ್ದಾರೆ. ಅಮೀರ್‌ಖಾನ್ ಮತ್ತು ಅವರ ಪತ್ನಿ ಕಿರಣ್‌ರಾವ್ ಜಂಟಿ ಹೇಳಿಕೆಯಲ್ಲಿ ಮದುವೆಯಾದ 15 ವರ್ಷಗಳ ನಂತರ ವಿಚ್ಚೇದನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ – ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿ ಜೊತೆ ಇರಲಿದ್ದೇವೆ” ಎಂದು ದಂಪತಿಗಳು ಹೇಳಿದ್ದಾರೆ.
ಅಮೀರ್ ಖಾನ್ ಹಾಗೂ ಕಿರಣ್ ರಾವ್ 2005ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ ಲಗನ್ ಸೆಟ್‌ನಲ್ಲಿ ಪರಿಚಯಗೊಂಡು ನಂತರ ಸ್ನೇಹ ಪ್ರೀತಿಯಾಗಿ ವಿವಾಹಕ್ಕೆ ತಿರುಗಿತ್ತು. ಈ ಹಿಂದೆಯೇ ಬೇರೆ ಬೇರೆಯಾಗಿ ವಾಸಿಸುತ್ತಿದ್ದ ಅಮೀರ್ ಹಾಗೂ ಕಿರಣ್ ಮಕ್ಕಳ ವಿಚಾರಕ್ಕೆ ಬಂದಾಗ ಮಾತ್ರ ಒಂದಾಗುತ್ತಿದ್ದರು. ಒಟ್ಟಿಗೇ ವೆಕೇಷನ್, ಟ್ರಿಪ್‌ಗಳನ್ನು ಎಂಜಾಯ್ ಮಾಡುತ್ತಿದ್ದರು. ಲಾಕ್‌ಡೌನ್ ಸಮಯದಲ್ಲೂ ಈ ಜೋಡಿ ಮಕ್ಕಳೊಂದಿಗೆ ಜೊತೆಯಾಗಿದ್ದರು.
ಈ ಮೊದಲು ಅಮಿರ್ ಖಾನ್ ರಿನಾ ದತ್ತ ಎಂಬವರೊಂದಿಗೆ 1986ರಲ್ಲಿ ಮದುವೆಯಾಗಿದ್ದರು, ಅವರಿಗೆ ಇಬ್ಬರು ಮಕ್ಕಳಿದ್ದು, 2002ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.