LATEST NEWS
ಮಕ್ಕಳೆದುರು ಅರೆಬೆತ್ತಲೆ ಪ್ರಕರಣ -ಸಾಮಾಜಿಕ ಹೋರಾಟಗಾರ್ತಿ ರೆಹನಾ ಫಾತಿಮಾ ಅರೆಸ್ಟ್…

ಕೇರಳ : ಶಬರಿಮಲೆಗೆ ಪ್ರವೇಶಿಸಿ ಸುದ್ಧಿ ಮಾಡಿದ್ದ ಕೇರಳದ ಸಾಮಾಜಿಕ ಹೋರಾಟಗಾರ್ತಿ ರೆಹನಾ ಫಾತಿಮಾ ಕೊನೆಗೂ ಬಂಧಿಸಲಾಗಿದೆ. ಈ ಬಾರಿ ತನ್ನದೇ ಮಕ್ಕಳನ್ನು ಬಳಸಿಕೊಂಡು ತನ್ನ ಅರೆನಗ್ನ ದೇಹದಲ್ಲಿ ಚಿತ್ರ ಬಿಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಕಾರಣಕ್ಕಾಗಿ ಆಕೆಯ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಕೇರಳದ ಎರ್ನಾಕುಲಂ ಸೌತ್ ಪೋಲೀಸ್ ಠಾಣೆಯಲ್ಲಿ ರೆಹೆನಾ ಫಾತಿಮಾ ಶರಣಾಗಿದ್ದು, ಪೋಲೀಸರು ಆಕೆಯನ್ನು ಬಂಧಿಸಿದ್ದಾರೆ. ತನ್ನ ಮೇಲೆ ದಾಖಲಾಗಿದ್ದ ದೂರನ್ನು ಪ್ರಶ್ನಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ರೆಹನಾ ಫಾತಿಮಾ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಆಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ಸೂಚಿಸಿತ್ತು. ಹೈಕೋರ್ಟ್ ನ ಈ ಆದೇಶವನ್ನು ಪ್ರಶ್ನಿಸಿ ರೆಹನಾ ಫಾತಿಮಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಆದರೆ ಸುಪ್ರೀಂಕೋರ್ಟ್ ಕೂಡಾ ಈಕೆಯ ಅರ್ಜಿಯನ್ನು ವಜಾ ಮಾಡಿದ್ದು, ಕೇರಳ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು. ಇದೀಗ ರೆಹನಾ ಫಾತೀಮಾ ಪೋಲೀಸರಿಗೆ ಶರಣಾಗಿದ್ದಾರೆ. ತನ್ನ ಬಂಧನಕ್ಕೆ ಮೊದಲು ಈಕೆ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಈ ವಿಡಿಯೋದಲ್ಲಿ ಕೇರಳದಲ್ಲಿ ಕೊರೊನಾ ಮಹಾಮಾರಿ, ವಿಮಾನ ದುರ್ಘಟನೆಯಂತಹ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ನಾನೂ ಕೂಡಾ ನನ್ನ ಸಮಸ್ಯೆಯ ಇತ್ಯರ್ಥ್ಯಕ್ಕೆ ಪೋಲೀಸರಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದಾಳೆ.