Connect with us

LATEST NEWS

ಪೊಲೀಸ್ ಪೇದೆ ಕೊಲೆಯತ್ನ – ಸೂಕ್ತ ಕ್ರಮ, ಪ್ರಮೋದ್ ಮಧ್ವರಾಜ್

ಪೊಲೀಸ್ ಪೇದೆ ಕೊಲೆಯತ್ನ – ಸೂಕ್ತ ಕ್ರಮ ಭರವಸೆ ಪ್ರಮೋದ್ ಮಧ್ವರಾಜ್

ಉಡುಪಿ ಅಕ್ಟೋಬರ್ 17: ಜಿಲ್ಲೆಯಲ್ಲಿ ಯಾರು ಅಕ್ರಮ ನಡೆಸಿದರೂ ಅದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಅಕ್ರಮ ಗೋಸಾಗಾಟ ತಡೆಯಲು ಹೋದ ಪೊಲೀಸ್ ಸಿಬ್ಬಂದಿಯ ಮೇಲೆ ವಾಹನ ಹರಿಸಿ ಕೊಲೆಗೆ ಯತ್ನ ನಡೆದಿತ್ತು.

ಈ ಘಟನೆಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಜಿಲ್ಲೆಯಲ್ಲಿ ಅಕ್ರಮಕ್ಕೆ ಅವಕಾಶ ಇಲ್ಲ ಎಂದು ಹೇಳಿದರು. ಯಾರೇ ಆದರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಬೆಳಿಗ್ಗೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಇದ್ದರೂ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಈ ಘಟನೆಯ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡುತ್ತೆನೆ ಎಂದು ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *