BELTHANGADI
ಬೈಕ್ ಗೆ ಡಿಕ್ಕಿ ಹೊಡೆದ ಪಿಕಪ್ ಕಾಲೇಜು ವಿಧ್ಯಾರ್ಥಿ ಬಲಿ….!!

ಬೆಳ್ತಂಗಡಿ ಫೆಬ್ರವರಿ 20: ಪಿಕಪ್ ವಾಹನ ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿರುವ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತನನ್ನು ಕೊಕ್ರಾಡಿಯ ನಿವಾಸಿ, ಮೂಡುಬಿದಿರೆ ಕಾಲೇಜಿನ ವಿದ್ಯಾರ್ಥಿ ಉಜ್ವಲ್ ಹೆಗ್ಡೆ (18) ಎಂದು ಗುರುತಿಸಲಾಗಿದೆ. ಉಜ್ವಲ್ ಅವರು ಕಾಲೇಜಿಗೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಅವರಿಗೆ ತಂದೆ ಲಾಲ್ ಚಂದ್ರ ಹೆಗ್ಡೆ, ತಾಯಿ ಶಿಕ್ಷಕಿ ಅಂಬುಜಾ, ಸಹೋದರ ನವಲ್ ಹೆಗ್ಡೆ ಇದ್ದಾರೆ.
