LATEST NEWS
ಕಾರ್ಕಳ – ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಸ್ಕಿಡ್ ಆದ ಬೈಕ್ – ನವವಿವಾಹಿತೆ ಸಾವು

ಉಡುಪಿ ಜೂನ್ 29: ನಾಯಿಯೊಂದು ಬೈಕ್‌ಗೆ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ನವವಿವಾಹಿತೆಯೊಬ್ಬರು ದಾರುಣವಾಗಿ ಸಾವಿಗೀಡಾದ ಘಟನೆಯೊಂದು ಹೊಸ್ಮಾರು ಬಳಿ ನಡೆದಿದೆ.
ಮೃತರನ್ನು ನೀಕ್ಷಾ (26) ಎಂದು ಗುರುತಿಸಲಾಗಿದೆ. ಕಾರ್ಕಳ ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಜೂನ್ 28 ರ ಸಂಜೆ ತನ್ನ ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಾಯಿ ದಿಢೀರ್ ಅಡ್ಡ ಬಂದಿದ್ದು, ಬೈಕ್ ರಸ್ತೆಗೆಸೆಯಲ್ಪಟ್ಟಿತ್ತು.
ಸಹಸವಾರೆ ನೀಕ್ಷಾ ಅವರಿಗೆ ಈ ಅಪಘಾತದಲ್ಲಿ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ನವವಿವಾಹಿತೆ ಈದು ಗ್ರಾಮ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ ಇವರಾಗಿದ್ದು, ಇವರ ಮದುವೆ ಎರಡು ತಿಂಗಳ ಹಿಂದಷ್ಟೇ ನಡೆದಿತ್ತು.
