LATEST NEWS
ಪಂಪ್ ವೆಲ್ ಪ್ಲೈಓವರ್ ನಲ್ಲಿ ಭೀಕರ ರಸ್ತೆ ಅಪಘಾತ

ಪಂಪ್ ವೆಲ್ ಪ್ಲೈಓವರ್ ನಲ್ಲಿ ಭೀಕರ ರಸ್ತೆ ಅಪಘಾತ
ಮಂಗಳೂರು, ಮೇ 14:ರಾಷ್ಟ್ರೀಯ ಹೆದ್ದಾರಿ 66ರ ಹೊಸ ಪಂಪ್ ವೆಲ್ ಮೆಲ್ಸೇತುವೆಯಲ್ಲಿ ಟೆಂಪೋ ಹಾಗೂ ಟಿಪ್ಪರ್ ಡಿಕ್ಕಿಯಾದ ಘಟನೆ ನಡೆದಿದ್ದು, ಟೆಂಪೋ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಲಾಕ್ ಡೌನ್ ಸಂದರ್ಭ ಯಾವುದೇ ಅಪಘಾತ ಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿತ್ತು. ಆದರೆ ಲಾಕ್ ಡೌನ್ ಸಡಿಲಿಕೆ ಆದಂತೆ ಮತ್ತೆ ಅಪಘಾತಗಳ ಸಂಖ್ಯೆ ಮತ್ತೆ ಏರಿಕೆಯಾಗಿದೆ.

ಟೆಂಪೋ ಬೈಕಂಪಾಡಿಯಿಂದ ಕಾಸರಗೋಡಿಗೆ ತರಕಾರಿ ಸಾಗಾಟ ಮಾಡುತ್ತಿದ್ದು ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ.