Connect with us

LATEST NEWS

ಕಾರ್ಕಳ ಬಳಿ ಬಂಡೆಗೆ ಡಿಕ್ಕಿ ಹೊಡೆದ ಪ್ರವಾಸಿ ಬಸ್ 9 ಮಂದಿ ಸಾವು

ಕಾರ್ಕಳ ಬಳಿ ಬಂಡೆ ಡಿಕ್ಕಿ ಹೊಡೆದ ಪ್ರವಾಸಿ ಬಸ್ 9 ಮಂದಿ ಸಾವು

ಉಡುಪಿ ಫೆಬ್ರವರಿ 15: ಮೈಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟೂರಿಸ್ಟ್ ಬಸ್ ಕಾರ್ಕಳ ಸಮೀಪ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಪ್ರವಾಸಿಗರು ಮೃತಪಟ್ಟಿರುವ ಘಟನೆ ನಡೆದಿದೆ.

ಬಸ್ ಮೈಸೂರಿನಿಂದ ಮಂಗಳೂರಿಗೆ ಬರುತ್ತಿತ್ತು ಎಂದು ಹೇಳಲಾಗಿದ್ದು, ಕಾರ್ಕಳ ತಾಲೂಕಿನ ಮಾಳ ಬಳಿ ರಸ್ತೆ ಪಕ್ಕದ ಬಂಡೆ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿ 35 ಪ್ರವಾಸಿಗರು ಇದ್ದು ಅದರಲ್ಲಿ 9 ಮಂದಿ ಸಾವನಪ್ಪಿದ್ದಾರೆ. 7 ಮಂದಿ ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಸ್ ಮೈಸೂರು ಜಿಲ್ಲೆಗೆ ಸೇರಿದ್ದು ಎಂದು ತಿಳಿದು ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *