LATEST NEWS
ಬಿಕರ್ನಕಟ್ಟೆ ಬಳಿ ಭೀಕರ ರಸ್ತೆ ಅಪಘಾತ-ಸ್ಕೂಟರ್ ಸವಾರ ಸಾವು

ಮಂಗಳೂರು ಆಗಸ್ಟ್ 10: ಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂತೂರು ಸಮೀಪದ ಬಿಕರ್ನಕಟ್ಟೆ ಸಮೀಪ ನಡೆದಿದೆ. ಉಳಾಯಿಬೆಟ್ಟು ನಿವಾಸಿ ದಯಾನಂದ ಮೃತ ದುರ್ದೈವಿಯಾಗಿದ್ದಾನೆ. ಇಲ್ಲಿನ ಬಿಕರ್ನಕಟ್ಟೆ ಸಮೀಪ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಸ್ಕೂಟರ್ ಸವಾರ ಲಾರಿಯಡಿಗೆ ಬಿದ್ದಿದ್ದಾರೆ. ಇದರಿಂದಾಗಿ ಸ್ಕೂಟರ್ ಸವಾರನ ದೇಹ ಛಿದ್ರವಾಗಿದೆ
ಸ್ಥಳಕ್ಕೆ ಕದ್ರಿ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.