DAKSHINA KANNADA
ಪುತ್ತಿಲ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ
ಪುತ್ತಿಲ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ
ಮಂಗಳೂರು ಎಪ್ರಿಲ್ 5: 94ಸಿ ಅಡಿ ಜಾಗ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.
ಪುತ್ತಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದ ಆರೋಪಿ. ಮಹಿಳೆಯೊಬ್ಬರು 94 ಸಿ ಅಡಿ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು, ಸುಮಾರು ಒಂದೂವರೆ ವರ್ಷ ಆದರೂ ಅದನ್ನು ಗ್ರಾಮಲೆಕ್ಕಾಧಿಕಾರಿ ಮಂಜೂರು ಮಾಡಿರಲಿಲ್ಲ, ಹೋಗಿ ಕೇಳಿದಾಗ ಮಂಜೂರಾತಿಗೆ ಲಂಚದ ಹಣಕ್ಕೆ ಗ್ರಾಮಲೆಕ್ಕಾಧಿಕಾರಿ ಬೇಡಿಕೆ ಇಟ್ಟಿದ್ದರು.
ಈ ಹಿನ್ನಲೆ ಮಹಿಳೆಯಿಂದ 5000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವಾಗ ಎಸಿಬಿ ಪೊಲೀಸರು ಗ್ರಾಮಲೆಕ್ಕಾಧಿಕಾರಿ ಹರೀಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ.