LATEST NEWS
ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ
ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ
ಮಂಗಳೂರು ಅಕ್ಟೋಬರ್ 26: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಯ ಟೆಂಡರ್ ಕಾಮಗಾರಿ ಮಂಜೂರಾತಿಗೆ ಲಂಚ ಕೇಳಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಎಂಬಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಎರಡು ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯ ಟೆಂಡರ್ ಆದಂ ಎಂಬವರು ಅವರ ತಂದೆ ಪರವಾಗಿ ಬಿಡ್ಡ್ ಮಾಡಿದ್ದರು. ತಾಂತ್ರಿಕ ಬಿಡ್ಡನ್ನು ತೆರೆದಾಗ ಕಾಮಗಾರಿಯು ಆದಂ ತಂದೆಯವರಿಗೆ ಮಂಜೂರಾಗಿರುತ್ತದೆ.
ಬಳಿಕ ಸುಮಾರು 10 ದಿನಗಳ ಹಿಂದೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಟೆಕ್ನಿಕಲ್ ಅಸಿಸ್ಟೆಂಟ್ ರವರಾದ ಸೂರ್ಯನಾರಾಯಣ್ ಭಟ್ ರವರು ಮಂಗಳೂರಿನ ಕಛೇರಿಯಿಂದ ಅದೆ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಎಂಬವರ ಮೊಬೈಲ್ ನಿಂದ ಕಾಲ್ ಮಾಡಿ ಈ ನಿಮ್ಮ ಕಾಮಗಾರಿಯ ಫೈನಾನ್ಸಿಯಲ್ ಬಿಡ್ ತೆರೆಯಲು ಟೆಂಡರ್ ಮೊತ್ತದ 1% ಹಣವನ್ನು ಅಂದರೆ ರೂಪಾಯಿ 50,000/- ಸಾವಿರ ಹಣವನ್ನು ಅವರ ಕಛೇರಿಯ ಸೂಪರಿಡೆಂಟ್ ಇಂಜಿನಿಯರ್(S.E) ರವರಾದ ರವೀಂದ್ರ ಕಿಣಿಯವರು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಂತರ ಮಂಗಳೂರು ಎಸಿಬಿ ಕಛೇರಿಗೆ ಆದಂ ಹೋಗಿ ಮೂವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳ ಇಂದು ಸಂಜೆ ಮಂಗಳೂರು ಮಹಾನಗರದ ಕಟ್ಟಡದಲ್ಲಿ ಈ ಇಬ್ಬರು ಅಧಿಕಾರಿಗಳು ಆದಂ ಅವರ ಬಳಿಯಲ್ಲಿ ಲಂಚ 25,000/- ಸಾವಿರ ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಇಬ್ಬರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.