LATEST NEWS
ಕುಂದಾಪುರ ಕಂದಾಯ ನಿರೀಕ್ಷಕ ಭರತ್ ಶೆಟ್ಟಿ ಮೇಲೆ ಎಸಿಬಿ ದಾಳಿ

ಕುಂದಾಪುರ ನವೆಂಬರ್ 12: ಭೂ ಪರಿವರ್ತನೆಗಾಗಿ 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಕಂದಾಯ ನಿರೀಕ್ಷಕ ಭರತ್ ಶೆಟ್ಟಿ ಎಂಬುವರನ್ನು ಎಸಿಬಿ ತನ್ನ ಬಲೆಗೆ ಬಿಳಿಸಿದೆ. ಭೂ ಪರಿವರ್ತನೆಗಾಗಿ ವ್ಯಕ್ತಿಯೊಬ್ಬರಿಂದ 12,000 ರೂ. ಬೇಡಿಕೆ ಇಟ್ಟಿದ್ದ ಭರತ್ ಶೆಟ್ಟಿ ಅದರ ಮೊದಲ ಕಂತಾಗಿ 5,000 ನೀಡುವ ವೇಳೆ ಎಸಿಬಿ ತಂಡ ದಾಳಿ ನಡೆಸಿದೆ.
ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕರಾದ ಸತೀಶಕುಮಾರ, ಚಂದ್ರಕಲಾ, ಸಿಬ್ಬಂದಿಗಳಾದ ಪ್ರಸನ್ನ, ರವೀಂದ್ರ, ಅಬ್ದುಲ್ ಜಲಾಲ್, ರಾಘವೇಂದ್ರ ಹೋಸ್ಕೋಟೆ, ಸೂರಜ್, ಅಬ್ದುಲ್ ಲತೀಫ್ ಹಾಗೂ ಪ್ರತಿಮಾ ಇದ್ದರು.
