LATEST NEWS
ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿ ಪ್ರಾಜೆಕ್ಟ್ ಇಂಜಿನಿಯರ್ ಬಂಧನ

ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿ ಪ್ರಾಜೆಕ್ಟ್ ಇಂಜಿನಿಯರ್ ಬಂಧನ
ಮಂಗಳೂರು ಅಕ್ಟೋಬರ್ 3: ಸರಕಾರದಿಂದ ದೊರೆಯುವ ಬಯೋ ಗ್ಯಾಸ್ ಸಬ್ಸಿಡಿಗೆ ಎಜೆನ್ಸಿ ಮಾಲಕರೊಬ್ಬರಿಂದ ಪ್ರಾಜೆಕ್ಟ್ ಇಂಜಿನಿಯರ್ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಮಂಗಳೂರು ಜಿಲ್ಲಾ ಪಂಚಾಯತ್ ಕಛೇರಿಯಲ್ಲಿರುವ ಸಮಗ್ರ ಗ್ರಾಮೀಣ ಇಂಧನ ಯೋಜನೆಯ ಪ್ರಾಜೆಕ್ಟ್ ಇಂಜಿನಿಯರ್ ಅಗಿರುವ ಎನ್.ನಾಗೇಶ್ (M.I.E- ಇಂಡಿಯಾ ) ಇವರು 50,000/- ಲಂಚಕ್ಕೆ ಬೇಡಿಕೆ ಇಟ್ಟಿದ್ದು 15,000 ನೀಡಿದ್ದು ಮತ್ತೆ 35,000 ನೀಡದಿದ್ದರೆ ಸಬ್ಸಿಡಿ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ ನೊಂದ ಸಾರ್ವಜನಿಕ ನೇರವಾಗಿ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕಛೇರಿಗೆ ಹೋಗಿ ದೂರು ನೀಡಿ ಇಂದು 30,000 ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪ್ರಾಜೆಕ್ಟ್ ಇಂಜಿನಿಯರ್ ನ್ನು ಬಂಧಿಸಿದ್ದಾರೆ.