BANTWAL
ಬಿಸಿ ರೋಡ್ ಕೆಎಸ್ ಆರ್ ಟಿಸಿ ಡಿಪೋ ಮೇಲೆ ಎಸಿಬಿ ಪೊಲೀಸರ ದಾಳಿ
ಬಿಸಿ ರೋಡ್ ಕೆಎಸ್ ಆರ್ ಟಿಸಿ ಡಿಪೋ ಮೇಲೆ ಎಸಿಬಿ ಪೊಲೀಸರ ದಾಳಿ
ಬಂಟ್ವಾಳ ಅಗಸ್ಟ್ 2: ಬಿಸಿ ರೋಡ್ ನ ಕೆಎಸ್ಆರ್ ಟಿಸಿ ಡಿಪೋ ಮೇಲೆ ಎಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬಿ.ಸಿ.ರೋಡ್ ನ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಲಂಚ ಹಾಗೂ ಹಣದ ದುರುಪಯೋಗದ ದೂರಿನ ಹಿನ್ನಲೆಯಲ್ಲಿ ಎಸಿಬಿ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಬಿಸಿರೋಡ್ ನ ಕೆಎಸ್ಆರ್ ಟಿಸಿ ಡಿಪೋದಲ್ಲಿ ಅಧಿಕಾರಿಗಳು ಕಂಡಕ್ಟರ್ ಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಲ್ಲದೆ ಲಂಚ ನೀಡದೆ ಇದ್ದ ಕಂಡಕ್ಟರ್ ಗಳಿಗೆ ಕೆಟ್ಟು ಹೋದ ಟಿಕೆಟ್ ಮೆಶಿನ್ ನ್ನು ಅಧಿಕಾರಿಗಳು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಅಲ್ಲದೆ ಕೆಎಸ್ ಆರ್ ಟಿಸಿ ಅಧಿಕಾರಿಗಳು ಲಂಚ ಪಡೆಯುವುದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹರಿಯಬಿಡಲಾಗಿತ್ತು, ಈ ಹಿನ್ನಲೆಯಲ್ಲಿ ಈ ದಾಳಿ ನಡೆದಿದ್ದು ಎಸಿಬಿ ಪೊಲೀಸರು ಡಿಪೋದ ಅಧಿಕಾರಿಗಳ ಕಡತ ಪರಿಶೀಲನೆ ನಡೆಸುತ್ತಿದ್ದಾರೆ.