DAKSHINA KANNADA
ಉಳ್ಳಾಲ : ಅಂಕಪಟ್ಟಿ ಸಮಸ್ಯೆ, ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ತೀವ್ರ ವಿರೋಧ, ABVP ಗುಡುಗಿಗೆ ನಡುಗಿದ ಮಂಗಳೂರು ವಿಶ್ವ ವಿದ್ಯಾನಿಲಯ…!
ಉಳ್ಳಾಲ : ಅಂಕಪಟ್ಟಿ ಸಮಸ್ಯೆ, ಪರೀಕ್ಷಾ ಶುಲ್ಕ ಹೆಚ್ಚಳ ವಿರುದ್ಧ ವಿದ್ಯಾರ್ಥಿ ಸಮೂಹ ಗರಂ ಆಗಿದ್ದು ABVP ನೇತೃತ್ವದಲ್ಲಿ ಇಂದು ಶುಕ್ರವಾರ ಮಂಗಳೂರು ವಿಶ್ವ ವಿದ್ಯಾನಿಲಯದ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿತು.
ಮಂಗಳೂರು ವಿಶ್ವವಿದ್ಯಾಲಯದಲ್ಲಿನ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸಮಸ್ಯೆಗಳನ್ನು ಪರಿಹರಿಸಲು ಮೀನ ಮೇಷ ಎಣಿಸುತ್ತಿರುವ ಮಂಗಳೂರು ವಿವಿ ಆಡಳಿತ ಮಂಡಳಿ ವಿರುದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸಿತ್ತು. ಉಳ್ಳಾಲ ಕೊಣಾಜೆ ವಿವಿ ಎದುರು ಆಯೋಜನೆ ಮಾಡಲಾಗಿದ್ದ ಪ್ರತೀಭಟನೆಯಲ್ಲಿ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ ಎಬಿವಿಪಿ ಮುಖಂಡರು ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಒಂದಾಗಿದ್ದು ಪ್ರಾರಂಭದಿಂದಲೂ ಸಹ ತನ್ನದೇ ಆದ ಘನತೆ ಗೌರವವನ್ನು ಉಳಿಸಿಕೊಂಡು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹೊರೆಯನ್ನು ಹೇರದೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಪ್ರಶಕ್ತ ವರ್ಷಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿತ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕ ಮತ್ತು SC – ST ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಶುಲ್ಕ ವಿನಾಯತಿಯನ್ನು ಪರಿಗಣಿಸದೆ ಪೂರ್ಣ ಶುಲ್ಕ ಭರಿಸುವುದು ಮತ್ತು ಏಕಾಏಕಿ ಶುಲ್ಕದ ಏರಿಕೆಯೂ ವಿದ್ಯಾರ್ಥಿಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವುದರ ಜೊತೆಯಲ್ಲಿ ಶಿಕ್ಷಣದಿಂದ ವಂಚಿತರಾಗಿಸುವಂತಿದೆ. ಪ್ರಶಕ್ತ ಸಾಲಿನ ಶುಲ್ಕದಲ್ಲಿ ಸುಮಾರು ಶೇಕಡಾ 50 ರಿಂದ 60 ರಷ್ಟು ಏರಿಕೆಯನ್ನು ಮಾಡಿರುವುದು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎತ್ತಿ ತೋರಿಸಿದಂತಿದೆ.
ಮತ್ತು ಇದನ್ನು ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಪಠ್ಯಕ್ರಮಗಳ ಕಾರ್ಯಭಾರವನ್ನು ನಿರ್ಧರಿಸುವ ಹಾಗೂ ಐಚ್ಚಿಕ ಪತ್ರಿಕೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ನಿರ್ಧಾರ ಮಾಡುವ ತೀರ್ಮಾನವು ವಿಶ್ವವಿದ್ಯಾಲಯದ ವಿಷಯಗಳ ಅಧ್ಯಯನ ಮಂಡಳಿಗಳ ಅಂತಿಮ ತೀರ್ಮಾನವಾಗಿರುತ್ತದೆ. ಆದರೆ ಅಧ್ಯಯನ ಮಂಡಳಿಗಳು ನಿರ್ಧಾರ ಮಾಡಿರುವ ಕಾರ್ಯಭಾರದ ವಿರುದ್ಧವಾಗಿ ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಮಾಡಿರುವುದು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಉಪನ್ಯಾಸಕರಿಗೆ ಗೊಂದಲ ನಿರ್ಮಾಣ ಮಾಡಿದೆ. ಈ ವಿಷಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಮಧ್ಯಪ್ರವೇಶ ಎಷ್ಟು ಸೂಕ್ತ ಎಂಬುದನ್ನು ನೀವು ನಿರ್ಧರಿಸಬೇಕಾಗುತ್ತದೆ
ಮಾಪನ ಫಲಿತಾಂಶವನ್ನು ನೀಡದೆ ಪರೀಕ್ಷೆ ಕಟ್ಟಲು ದಿನಾಂಕ ಸೂಚಿಸುತ್ತಿರುವುದು ಎಷ್ಟು ಸೂಕ್ತ ಎಂಬುದನ್ನು ಯೋಚಿಸಬೇಕಾಗಿದೆ. ಅದಲು ಬದಲಾಗಿರುವ ಅನೇಕ ಪ್ರಕರಣಗಳು ಕಂಡುಬಂದಿದೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು. ಮತ್ತು ಮರುಮೌಲ್ಯ ಮೌಲ್ಯಮಾಪನ ಫಲಿತಾಂಶಗಳು ಯಾರದೋ ಅಂಕಗಳು ಇನ್ಯಾವುದೋ ವಿದ್ಯಾರ್ಥಿಗೆ ಪ್ರಕಟವಾಗುತ್ತದೆ. ಉತ್ತರ ಪತ್ರಿಕೆಗಳೇ ಪತ್ರವನ್ನು ದೊರಕದೆ ಇರುವುದು ಶೋಚನಿಯ ಸಂಗತಿಯಾಗಿದೆ. ಮತ್ತು ಉದ್ಯೋಗವನ್ನು ಹುಡುಕುತ್ತಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಶಿಕ್ಷಣವನ್ನು ಆಧರಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಭರದಲ್ಲಿದ್ದು, ಈ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಈಗಾಗಲೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಮುಂದಿನ ಉದ್ಯೋಗ ಮತ್ತು ಈ ರೀತಿಯ ಅನಾನುಕೂಲತೆಗಳಿಂದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈ ಕೂಡಲೇ ಈ ರೀತಿಯ ಪ್ರಮಾಣ ಪತ್ರ ಸಂಬಂಧಿತ ಸಮಸ್ಯೆಗಳನ್ನು ತಕ್ಷಣದಲ್ಲಿ ಪರಿಹರಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಅನುವು ಮಾಡಿಕೊಡಬೇಕೆಂಬುದು ವಿದ್ಯಾರ್ಥಿ ಪರಿಷತ್ ನ ಅಗ್ರಹವಾಗಿದೆ.
ವಿಶ್ವವಿದ್ಯಾಲಯದಿಂದ ನೀಡಬೇಕಾದ ಮಾರ್ಕ್ಸ್ ಕಾರ್ಡ್ ಗಳು ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದ್ದು, ಡಿಜಿ ಲಾಕರ್ ನ ಮೂಲಕ ಲಭ್ಯವಾಗುವ ಅಂಕಪಟ್ಟಿಗಳಲ್ಲಿ ಹಲವಾರು ಲೋಪ ದೋಷಗಳು ಕಂಡುಬರುತ್ತಿವೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳಿಗೆ ಸಂಬಂಧಿಸಿದ ಅಂಕಗಳು UUCMS ಪೋರ್ಟಲ್ ನಲ್ಲಿ ನಮೂದಿಸದೆ ಇರುವುದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಸೃಷ್ಟಿಸಿದ್ದು, ವಿದ್ಯಾರ್ಥಿಗಳಿಗೆ ಸಂಬಂಧಿತ ಸ್ಕಾಲರ್ ಶಿಪ್, ಹಾಸ್ಟೆಲ್ ಇನ್ನಿತರ ಸೌಲಭ್ಯಗಳಿಂದ ವಂಚಿತಗೊಳಿಸುತ್ತಿದೆ. ಆದಕಾರಣ ಈ ರೀತಿಯ ಪರೀಕ್ಷಾ ಫಲಿತಾಂಶ ಸಂಬಂಧಿತ ಸಮಸ್ಯೆಗಳನ್ನು ತಕ್ಷಣದಲ್ಲಿ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬುದು ಪರಿಷತ್ ನ ಅಗ್ರಹವಾಗಿದೆ.
ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಕೊರತೆ ಅಷ್ಟೇ ಅಲ್ಲದೆ ಮೂಲಭೂತ ಸೌಕರ್ಯಗಳ ಸಮಸ್ಯೆ, ಪಿಠೋಪಕರಗಳ ಸಮಸ್ಯೆ, ಪ್ರಾಯೋಗಿಕ ಉಪಕರಣಗಳ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳಿದ್ದು ಇಂತಹ ಕೊರತೆಗಳಿಂದಾಗಿ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳನ್ನು ಕುರಿತು ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.