Connect with us

    DAKSHINA KANNADA

    ಮಂಗಳೂರು ವಿವಿ ಶುಲ್ಕ ಹೆಚ್ಚಳ ಹಾಗೂ ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನ ಬಗೆಹರಿಸುವಂತೆ ಉಪ ಕುಲಪತಿಗೆ ಮನವಿ ಜೊತೆ  ಹೋರಾಟದ ಎಚ್ಚರಿಕೆ ನೀಡಿದ ABVP

    ಮಂಗಳೂರು :ಮಂಗಳೂರು ವಿವಿ ಶುಲ್ಕ ಹೆಚ್ಚಳ ಹಾಗೂ ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನ ಬಗೆಹರಿಸುವಂತೆ ಉಪ ಕುಲಪತಿಗೆ ಮನವಿ ಜೊತೆ  ಹೋರಾಟದ ಎಚ್ಚರಿಕೆಯನ್ನು  ABVP ನೀಡಿದೆ.

    ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಒಂದಾಗಿದ್ದು ಪ್ರಾರಂಭದಿಂದಲೂ ಸಹ ತನ್ನದೇ ಆದ ಘನತ ಗೌರವವನ್ನು ಉಳಿಸಿಕೊಂಡು ಬಂದಿದೆ. ಬೇರೆ ಬೇರೆ ಜಿಲ್ಲೆಗಳಿಂದ, ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣವನ್ನು ಪಡೆಯುವ ಉದ್ದೇಶಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯವನ್ನು ಆಯ್ಕೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರ ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವವಿದ್ಯಾಲಯದಲ್ಲಿ ಕಾಣಬರುತ್ತಿರುವ ಸಾಕಷ್ಟು ಬದಲಾವಣೆಗಳಿಂದಾಗಿ ವಿಶ್ವವಿದ್ಯಾಲಯದ ಮೌಲ್ಯಯುತ ಶಿಕ್ಷಣವೆಂಬುದು ಮುಸುಕಾಗಿದೆ.
    ಮಂಗಳೂರು ವಿಶ್ವವಿದ್ಯಾಲಯವು ಹತ್ತಾರು ವರ್ಷಗಳಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹೊರೆಯನ್ನು ಹೇರದ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಮುಂಚೂಣಿಯಲ್ಲಿತ್ತು. ಅದರ ಪ್ರಶಕ್ತ ವರ್ಷಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿತ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕಗಳ ಏಕಾಏಕಿ ಏರಿಕೆಯೂ ವಿದ್ಯಾರ್ಥಿಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವುದರ ಜೊತೆಯಲ್ಲಿ ಶಿಕ್ಷಣದಿಂದ ವಂಚಿತರಾಗಿಸುವಂತಿದೆ. ಪ್ರಶಕ್ತ ಸಾಲಿನ ಶುಲ್ಕದಲ್ಲಿ ಸುಮಾರು ಶೇಕಡಾ 50 ರಿಂದ 60 ರಷ್ಟ ಏರಿಕೆಯನ್ನು ಮಾಡಿರುವುದು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎತ್ತಿ ತೋರಿಸಿದಂತಿದೆ, ಮತ್ತು ಇದನ್ನು ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ
    ಪಠ್ಯಕ್ರಮಗಳ ಕಾರ್ಯಭಾರವನ್ನು ನಿರ್ಧರಿಸುವ ಹಾಗೂ ಐಚ್ಚಿಕ ಪತ್ರಿಕೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ನಿರ್ಧಾರ ಮಾಡುವ ತೀರ್ಮಾನವು ವಿಶ್ವವಿದ್ಯಾಲಯದ ವಿಷಯಗಳ ಅಧ್ಯಯನ ಮಂಡಳಿಗಳ ಅಂತಿಮ ತೀರ್ಮಾನವಾಗಿರುತ್ತದೆ, ಆದರೆ ಅಧ್ಯಯನ ಮಂಡಳಿಗಳು ನಿರ್ಧಾರ ಮಾಡಿರುವ ಕಾರ್ಯಭಾರದ ವಿರುದ್ಧವಾಗಿ ಸಿಂಡಿಕೇಟ್‌ ಸಭೆಯಲ್ಲಿ ನಿರ್ಧಾರ ಮಾಡಿರುವುದು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಉಪನ್ಯಾಸಕರಿಗೆ ಗೊಂದಲ ನಿರ್ಮಾಣ ಮಾಡಿದೆ. ಈ ವಿಷಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ನದ ಪವೇಶ ಎಷ್ಟು ಸೂಕ್ತ ಎಂಬುದನ್ನು ನೀವು ನಿರ್ಧರಿಸಬೇಕಾಗುತ್ತದೆ.
    ಮೌಲ್ಯಮಾಪನ ಫಲಿತಾಂಶಗಳು ಯಾರದೋ ಅಂಶಗಳು ಇನ್ಯಾವುದೋ ವಿದ್ಯಾರ್ಥಿಗೆ ಪ್ರಕಟವಾಗುತ್ತದೆ.ಉತ್ತರ ಪತ್ರಿಕೆಗಳ ಅದಲು ಬದಲಾಗಿರುವ ಅನೇಕ ಪ್ರಕರಣಗಳು ಕಂಡುಬಂದಿದೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು ಮತ್ತು ಗುರುಮೌಲ್ಯ ಮಾವಿನ ಫಲಿತಾಂಶವನ್ನು ನೀಡದೆ ಪರೀಕ್ಷೆ ಕಟ್ಟಲು ದಿನಾಂಕ ಸೂಚಿಸುತ್ತಿರುವುದು ಎಷ್ಟು ಸೂಕ್ತ ಎಂಬುದನ್ನ ಯೋಚಿಸಬೇಕಾದ ಅನಿವಾರ್ಯತೆಯಿದೆ. ಈಗಾಗಲೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಮುಂದಿನ ಉದ್ಯೋಗ ಮತ್ತು ಶಿಕ್ಷಣವನ್ನು ಅದರಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಭರದಲ್ಲಿದ್ದು , ಈ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ದೊರಕದೆ ಇರುವುದು ಶೋಚನಿಯ ಸಂಗತಿಯಾಗಿದೆ, ಮತ್ತು ಉದ್ಯೋಗವನ್ನು ಹುಡುಕುತ್ತಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಈ ರೀತಿಯ ಅನಾನುಕೂಲತೆಗಳಿಂದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈ ಕೂಡಲೇ ಈ ರೀತಿಯ ಪ್ರಮಾಣ ಪತ್ರ ಸಂಬಂಧಿತ ಸಮಸ್ಯೆಗಳನ್ನು ತಕ್ಷಣದಲ್ಲಿ ಪರಿಹರಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಅನುವು ಮಾಡಿಕೊಡಬೇಕೆಂಬುದು ವಿದ್ಯಾರ್ಥಿ ಪರಿಷತ್  ನ ಆಗ್ರಹವಾಗಿದೆ.
    ವಿಶ್ವವಿದ್ಯಾಲಯದಿಂದ ನೀಡಬೇಕಾದ ಮಾರ್ಕ್ಸ್ ಕಾರ್ಡ್ , ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದ್ದು, ಡಿಜಿ ಲಾಕರ್ ನ ಮೂಲಕ ಲಭ್ಯವಾಗುವ ಅಂಕಪಟ್ಟಿಗಳಲ್ಲಿ ಹಲವಾರು ಲೋಪ ದೋಷಗಳು ಕಂಡುಬರುತ್ತಿವೆ, ಸಾಕಷ್ಟು ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳಿಗೆ ಸಂಬಂಧಿಸಿದ ಅಂಶಗಳು UUCMS ಪೋರ್ಟಲ್ ನಲ್ಲಿ ನಮೂದಿಸದೆ ಇರುವುದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಸೃಷ್ಟಿಸಿದ್ದು, ವಿದ್ಯಾರ್ಥಿಗಳಿಗೆ ಸಂಬಂಧಿತ ಸ್ಕಾಲರ್ ಕಿಡ್, ಹಾಸ್ಟೆಲ್ ಇನ್ನಿತರ ಸೌಲಭ್ಯಗಳಿಂದ ವಂಚಿತಗೊಳಿಸುತ್ತಿದೆ. ಆದಕಾರಣ ಈ ರೀತಿಯ ಪರೀಕ್ಷಾ ಫಲಿತಾಂಶ ಸಂಬಂಧಿತ ಸಮಸ್ಯೆಗಳನ್ನು ತಕ್ಷಣದಲ್ಲಿ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬುದು ಪರಿಷತ್‌ ನ ಆಗ್ರಹವಾಗಿದೆ.
    ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಕೊರತೆ ಅಷ್ಟೇ ಅಲ್ಲದೆ ಮೂಲಭೂತ ಸೌಕರ್ಯಗಳ ಸಮಸ್ಯೆ, ಪಿಟೋಪಕರಗಳ ಸಮಸ್ಯೆ, ಪ್ರಾಯೋಗಿಕ ಉಪಕರಣಗಳ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳಿದ್ದು ಇಂತಹ ಕೊರತೆಗಳಿಂದಾಗಿ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳನ್ನು ಕುರಿತು ವಿಶ್ವವಿದ್ಯಾಲಯ ಅಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ವಿದ್ಯಾರ್ಥಿ ಪರಿಷತ್‌ ಆಗ್ರಹಿಸುವುದಲ್ಲದೇ,ಮುಂದಿನ ದಿನಗಳಲ್ಲಿ ಈ * ಸಮಸ್ಯೆಗಳಿಗೆ ಪರಿಹಾರಗಳು ದೊರಕದ ಹೋದಲ್ಲಿ ಇದರ ವಿರುದ್ಧ ತೀವ್ರ ಹೋರಾಟವನ್ನು ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಈ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೀಡುತ್ತದೆ ಎಂದು ಎಚ್ಚರಿಸಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *