Connect with us

    LATEST NEWS

    ಅಸಹಜವಾಗಿ ವರ್ತಿಸಿದ ಚಿರತೆ!

    ಹಿಮಾಚಲ ಪ್ರದೇಶ, ಜನವರಿ 16: ಹಿಮಾಚಲ ಪ್ರದೇಶದ ತಿರ್ಥನ್ ಕಣಿವೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುವleopard ಚಿರತೆಯೊಂದರ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಸಂಬಂಧ ಎರಡು ವಿಡಿಯೋ ಕ್ಲಿಪ್‌ಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

    ಈ ವಿಡಿಯೋಗಳಲ್ಲಿ ಚಿರತೆಯೊಂದು ಪ್ರವಾಸಿಗರ ಸುತ್ತ ಓಡಾಡುತ್ತಿದ್ದು, ಅವರೆಲ್ಲಾ ಗಾಬರಿಗೊಂಡಿರುವುದನ್ನು ನೋಡಬಹುದಾಗಿದೆ. ಆದರೆ ಚಿರತೆಯು ಬಹಳ ಕೂಲ್‌ ಆಗಿದ್ದು, ಕೆಲ ಯುವಕರೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ.

    ಮತ್ತೊಂದು ವಿಡಿಯೋದಲ್ಲಿ ಇದೇ ಚಿರತೆ ಹಿರಿಯ ವ್ಯಕ್ತಿಯೊಬ್ಬರೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಚಿರತೆಯ ಈ ಅಸಹಜ ವರ್ತನೆ ಸಾಕಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಇದೇ ವೇಳೆ ಜನರ ವರ್ತನೆ ಕುರಿತಂತೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಭಾರತೀಯ ಅರಣ್ಯ ಸೇವೆಯ ಮತ್ತೊಬ್ಬ ಅಧಿಕಾರಿ ರಮೇಶ್ ಪಾಂಡೆ, “ಮರಿಯಾಗಿದ್ದಾಗಿನಿಂದ ಮಾನವರಿಂದ ಸಾಕಲ್ಪಟ್ಟ ಕಾಡು ಪ್ರಾಣಿಗಳು ಹೀಗೆ ವರ್ತಿಸುತ್ತವೆ. ವನ್ಯ ಜೀವಿಗಳನ್ನು ಸಾಕು ಪ್ರಾಣಿಗಳಂತೆ ಇಟ್ಟುಕೊಳ್ಳುವ ಟ್ರೆಂಡ್ ಬಹಳ ದುರದೃಷ್ಟಕರ ಹಾಗೂ ಚಿಂತಿಸಬೇಕಾದ ವಿಚಾರ” ಎಂದು ವಿವರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply