Connect with us

DAKSHINA KANNADA

ವಿದೇಶದಲ್ಲಿಉದ್ಯೋಗ ನೆಪಹೇಳಿ ಹೆತ್ತವರು,ಗೆಳತಿಯರನ್ನು ಯಮಾರಿಸಿ ಪ್ರಿಯತಮನೊಂದಿಗೆ ಸುಳ್ಯದ ಯುವತಿ ಪರಾರಿ..!

ಸುಳ್ಯ, ಆಗಸ್ಟ್ 31 : ಈ ಕಾಲನೇ ಹಾಗೇ ಯಾರನ್ನು ಯಾವಾಗ  ಹೇಗೆ  ನಂಬಬೇಕೋ ಗೊತ್ತಾಗ್ತಿಲ್ಲ. ವಿದೇಶದಲ್ಲಿಉದ್ಯೋಗ ನೆಪಹೇಳಿ ಹೆತ್ತವರು,ಗೆಳತಿಯರನ್ನು ಯಮಾರಿಸಿ ಸುಳ್ಯದ ಯುವತಿಯೊಬ್ಬಳು ಪ್ರಿಯತಮನೊಂದಿಗೆ ಪರಾರಿಯಾದ ಘಟನೆ ನಡೆದಿದೆ.

ತನ್ನ ಲವರ್‌ ಜೊತೆ ಎಸ್ಕೇಪ್‌ ಆಗುವ ಸಲುವಾಗಿ ತನ್ನನ್ನು ನಂಬಿದ್ದ ಹೆತ್ತವರನ್ನೇ ಮೋಸ ಮಾಡಿದ್ದು ಸಮಾಜವೇ ತಲೆತಗ್ಗಿಸುವಂತಾಗಿದೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ ಈ ವರ್ಷವಷ್ಟೇ ಪಿಯುಸಿ ತೇರ್ಗಡೆಹೊಂದಿದ್ದಳು ಬಡತನದಲ್ಲಿಯೇ ಇದ್ದ ಕುಟುಂಬಕ್ಕೆ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕ ಸುದ್ದಿಕೇಳಿ ಸಂಭ್ರಮ ಮುಗಿಲು ಮುಟ್ಟಿತ್ತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವತಃ ಈಕೆಯನ್ನು ಬಿಟ್ಟು, ಒಳ್ಳೆಯದಾಗಲಿ ಎಂದು ಹರಸಿ ಬಂದಿದ್ದಾರೆ.ವಿಮಾನ ನಿಲ್ದಾಣದ ಒಳಹೊಕ್ಕು ದೂರದಿಂದಲೇ ಅಪ್ಪಅಪ್ಪನಿಗೆ ಟಾಟಾ ಮಾಡಿದ್ದಾರೆ. ಪೋಷಕರು ಕೂಡ ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು  ನೆಮ್ಮಮದಿಯಿಂದ ಮನೆಗೆ ಹೊರಟಿದ್ದಾರೆ. ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು ಮನೆಗೆ ಬಂದ ಕುಟುಂಬದವರು, ತಮ್ಮ ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ಇದರ ಮಾಹಿತಿಗಳನ್ನೂ ಕೂಡ ಹಂಚಿಕೊಂಡಿದ್ದಾರೆ. ಇನ್ನೇನು ಮಗಳು ವಿದೇಶಕ್ಕೆ ಹೊರಟು ಕಷ್ಟಪರಿಹಾರವಾಗಿ ನೆಮ್ಮದಿಯ  ಕನಸು ಕಂಡ ಪೋಷಕರಿಗೆ ದಿಗಿಲು ಬಡಿದಂತಾಗಿದೆ.  ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಹೊರಟಿರಬಹುದೆಂದು ಕರೆಮಾಡಿದ್ದಾಗ ಆಕೆಯ ಫೋನ್‌ ರಿಂಗ್‌ ಆಗಿದೆ. ಫೋನ್‌ ರಿಂಗ್‌ ಆಗಿದ್ದಿರಂದ ಮನೆಯವರಿಗೆ ಅನುಮಾನ ಶುರುವಾಗಿದೆ. ಈಗಾಗಲೇ ವಿಮಾನ ಹೊರಟ ಸಮಯವಾಗಿದೆ. ಹಾಗಿದ್ದರೂ ಆಕೆಯ ಮೊಬೈಲ್‌ ರಿಂಗ್‌ ಆಗೋದಕ್ಕೆ ಹೇಗೆ ಸಾಧ್ಯ ಎನ್ನುವ ಅನುಮಾನ ಬಂದಿದೆ. ಆ ಬಳಿಕ ಕೆಲ ದಿನಗಳ ಬಳಿಕ ಆಕೆಯನ್ನು ಧರ್ಮಸ್ಥಳ ಬಸ್‌ನಲ್ಲಿ ನೋಡಿರುವುದಾಗಿ ಕೆಲವರು ತಿಳಿಸಿದ್ದಾರೆ.  ವಿಮಾನ ನಿಲ್ದಾಣದ ಒಳಹೊಕ್ಕು ಹೈ ಡ್ರಾಮಾ ಮಾಡಿದ್ದ ಪುತ್ರಿ ಆ ಬಳಿಕ ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆಗೆ  ಮಗಳು ಕಾಣೆ ಆಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಪೋಷಕರು ಬಂದರೆ, ಅವರನ್ನು ಬೆಂಗಳೂರಿನಲ್ಲೇ ದೂರು ನೀಡಬೇಕೆಂದು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಇನ್ನು ಹಿಂದೂ ಸಂಘಟನೆಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿವೆ. ಇದೀಗ ಯುವತಿಯ ಪೋಷಕರು ಮತ್ತೆ ಬೆಂಗಳೂರಿಗೆ ತೆರಳಿ ಮಗಳು ನಾಪತ್ತೆಯಾಗಿರುವ ದೂರು ದಾಖಲು ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *