LATEST NEWS
ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ಮಾರಿ ಲಕ್ಷಾಧೀಶ್ವರನಾದ ಯುವಕ!

ಪ್ರಯಾಗ್ರಾಜ್: ಜನವರಿ 13ರಂದು ಆರಂಭವಾಗಿ ಫೆಬ್ರವರಿ 26ರಂದು ಸಂಪನ್ನಗೊಂಡ ಮಾಹಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಭೇಟಿ ನೀಡಿದ್ದು, ಗಿನ್ನೆಸ್ ದಾಖಲೆಗೆ ಭಾಜನವಾಗಿದೆ. ಹಲವು ಮೊದಲುಗಳಿಗೆ ಈ ಬಾರಿಯ ಮಹಾಕುಂಭಮೇಳವು ಸಾಕ್ಷಿಯಾಗಿದ್ದು, ಇದೀಗ ವಿದ್ಯಾರ್ಥಿಯೊಬ್ಬ ಕುಂಭಮೇಳದಿಂದ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದು, ಸದ್ಯ ಈ ಸುದ್ದಿ ವೈರಲ್ ಆಗಿದೆ.

ಜನವರಿ 13ರಂದು ಆರಂಭವಾಗಿ ಫೆಬ್ರವರಿ 26ರಂದು ಸಂಪನ್ನಗೊಂಡ ಮಹಾಕುಂಭ ಮೇಳಕ್ಕೆ (Maha kumbh Mela) ವಿಶ್ವದ ಮೂಲೆ ಮೂಲೆಗಳಿಂದ ಭಕ್ತರ ದಂಡೇ ಆಗಮಿಸಿದ್ದು, ಉತ್ತರಪ್ರದೇಶ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಮಹಾಕುಂಭಮೇಳವು ಅನೇಕರ ಬದುಕಿನ ದಿಕ್ಕನ್ನೇ ಬದಲಿಸಿದ್ದು, ಅದೇ ರೀತಿ ಕಾಲೇಜು ವಿದ್ಯಾರ್ಥಿಯೊಬ್ಬ ಕುಂಭಮೇಳದಿಂದಾಗಿ ಲಕ್ಷಾಧೀಶ್ವರನಾಗಿದ್ದು, ಸದ್ಯ ಇವರ ಸಕ್ಸಸ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ.

ಬಿಹಾರ ಮೂಲದ 22 ವರ್ಷದ ಯುವಕ ಉತ್ಕರ್ಷ್ ಎಂಬುವವರು ವಡೋದರಾದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಪ್ರಯಾಗ್ರಾಜ್ನಲ್ಲಿ ನಡೆಯುತ್ತಿದ್ದ ಮಹಾಕುಂಭಮೇಳಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಗಂಗಾಜಲವನ್ನು ಬಾಟಲಿನ್ಲಿ ತುಂಬಿಸಿ ಮಾರಾಟ ಮಾಡುವ ಆಲೋಚನೆ ಅವರ ತಲೆಗೆ ಬಂದಿದ್ದು, ಕೂಡಲೇ ವೆಬ್ಸೈಟ್ಅನ್ನು ಆರಂಭಿಸಿ ಗಂಗಾಜಲವನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ.
ಇವರ ಕಾರ್ಯ ಫಳ ಕೊಟ್ಟಿದ್ದು, ತ್ರಿವೇಣಿ ಸಂಗಮದ ನೀರಿಗೆ ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಹೆಚ್ಚಿನ ಬೇಡಿಕೆ ಬರಲು ಆರಂಭಿಸಿದ್ದು, 45 ದಿನದಲ್ಲೇ 15ಲಕ್ಷಕ್ಕೂ ಅಧಿಕ ಸಂಪಾದನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಯುವಕನ ಕಾರ್ಯಕ್ಕೆ ಸ್ನೇಹಿತರು ಕೂಡ ಸಾಥ್ ನೀಡಿದ್ದು, ಕುಂಭಮೇಳ ಮುಗಿದರು ತ್ರಿವೇಣಿ ಸಂಗಮದ ನೀರಿಗೆ ಇನ್ನೂ ಬೇಡಿಕೆ ಇದೆ ಎಂದು ಯುವಕ ಉತ್ಕರ್ಷ್ ಹೇಳಿದ್ದಾರೆ.
ಪ್ರಯಾಗ್‌ರಾಜ್‌ನ ಅರೈಲ್ ಪ್ರದೇಶದ ದೋಣಿ ಚಾಲಕ ಪಿಂಟು ಮಹಾರ ಎಂಬುವವರು 45 ದಿನದಲ್ಲಿ 30 ಕೋಟಿ ರೂಪಾಯಿ ಸಂಪಾದಿಸಿದ್ದು, ಇವರ ಯಶೋಗಾಥೆ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಇದೀಗ ಯುವಕನೋರ್ವಗಂಗಾಜಲವನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವ ಮೂಲಕ ಲಕ್ಷಾಧೀಶ್ವರನಾಗಿದ್ದು, ಈತನ ಸಕ್ಸಸ್ ಸ್ಟೋರಿ ಅನೇಕರಿಗೆ ಮಾದರಿಯಾಗಿದೆ.