Connect with us

DAKSHINA KANNADA

ಕೋಸ್ಟಲ್ ಫ್ರೆಂಡ್ಸ್‌ ವಿಶಿಷ್ಟ ಪ್ರಯತ್ನ : ಹೊರಜಗತ್ತೇ ನೋಡಿರದ ಅಶಕ್ತ ರೋಗಿಗಳಿಗೆ ಮಂಗಳೂರು ದರ್ಶನ..!

ಮಂಗಳೂರು : ಕಳೆದ 5 ವರ್ಷಗಳಿಂದ ಮಂಗಳೂರು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಕೋಸ್ಟಲ್ ಫ್ರೆಂಡ್ಸ್ ಎಂಬ ಸಮಾನ ಮನಸ್ಕ ಯುವಕರ ತಂಡ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ ಸೈ ಅನಿಸಿದೆ.

ಹಲವು ಕಾರಣಗಳಿಂದ ಕಳೆದ ಹಲವು ವರ್ಷಗಳಿಂದ ಹೊರ ಜಗತ್ತನ್ನೇ ನೋಡಿರಲಾರದ ಹಾಸಿಗೆ ಪೀಡಿತರಾಗಿರುವ ಆಯ್ದ ರೋಗಿಗಳಿಗೆ ಒಂದು ದಿನದ ವಿಶೇಷ ಪ್ರವಾಸ ಆಯೋಜಿಸಲಾಗಿತ್ತು. ಒಟ್ಟು ಆರು ಮಂದಿ ಹಾಸಿಗೆ ಪೀಡಿತರು ಈ ಪ್ರವಾಸದ ಪ್ರಯೋಜನ ಪಡೆದುಕೊಂಡರರು, ಅಷ್ಟೊಂದು ಸುಲಭವಲ್ಲದ ಕಠಿಣ ಸವಾಲಿನ 6 ಜನರ ಈ ಪ್ರವಾಸ ಮಂಗಳೂರು ನಗರದಿಂದ ಪ್ರಾರಂಭಗೊಂಡು ಮೊದಲು ಪಿಲಿಕುಳ ನಿಸರ್ಗಧಾಮಕ್ಕೆ ತೆರಳಿತು. ಪಿಲಿಕುಳದಲ್ಲಿ ಸರೋವರ, ಉದ್ಯಾನವನ, ಗುತ್ತಿನ ಮನೆ ಬಳಿಕ ಮೃಗಾಲಯಕ್ಕೆ ಅವರನ್ನು ಕರೆದೊಯ್ಯಲಾಯಿತು. ಅಲ್ಲಿಂದ ತಣ್ಣೀರು ಬಾವಿ ಬೀಚ್ ಮತ್ತು ಸಂಜೆ ನಗರ ಮಾಲ್ ಒಂದಕ್ಕೆ ಕರೆದುಕೊಂಡು ಹೋಗಿ ಅವರನ್ನು ಖುಷಿ ಪಡಿಸಲಾಯಿತು. ‘ಕೋಸ್ಟಲ್ ಫ್ರೆಂಡ್ಸ್’ ತಂಡದ ಸದಸ್ಯರ ಜೊತೆಗೆ ವೈದ್ಯಕೀಯ ತಂಡವೂ ಹಾಸಿಗೆ ಪೀಡಿತರಿಗೆ ನೆರವಾಗಲು ಸಾಥ್ ನೀಡಿತ್ತು. ಪರಿಣಿತ ಡಾಕ್ಟರ್’ಗಳು, ನರ್ಸ್’ಗಳು, ಆಂಬುಲೆನ್ಸ್ ಗಳು, ಮತ್ತು 40 ಕ್ಕೂ ಹೆಚ್ಚು ಅನುಭವಿ ಸ್ವಯಂಸೇವಕರ ತಂಡ ಜೊತೆಗಿತ್ತು.  ಆರೋಗ್ಯದ ಸಮಸ್ಯೆ ಇರುವವರಿಗೆ ಆರ್ಥಿಕ ನೆರವು, ಅಗತ್ಯ ಸಾಧನಗಳ ಪೂರೈಕೆ ಮೊದಲಾದ ಸೇವೆಗಳನ್ನು ಸಾಮಾನ್ಯವಾಗಿ ಹೆಚ್ಚಿನ ಸಂಘ ಸಂಸ್ಥೆಗಳು ಮಾಡುತ್ತಿದೆ. ಆದರೆ ಮಂಗಳೂರಿನಲ್ಲೊಂದು ಸರಕಾರೇತರ ಸಂಸ್ಥೆ ಯೊಂದು ಹಾಸಿಗೆ ಪೀಡಿತರನ್ನು ಒಂದು ದಿನದ ಮನರಂಜನಾ ಪ್ರವಾಸ ಹಮ್ಮಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಜೊತೆಗೆ ಇತರರಿಗೂ ಇದೊಂದು ಪ್ರೇರಣೆಯಾಯಿತು.

ಕೋಸ್ಟಲ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಶರೀಫ್ ಅಬ್ಬಾಸ್, ಕೋಸ್ಟಲ್ ಫ್ರೆಂಡ್ಸ್ ಅಧ್ಯಕ್ಷ ಇಮ್ತಿಯಾಝ್ ಕೋಸ್ಟಲ್ ಫ್ರೆಂಡ್ಸ್ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ಫೈಝಲ್ ರೆಹಮಾನ್, ಕಾರ್ಯದರ್ಶಿ ರಿಯಾಝ್ ಕಣ್ಣೂರು, ಸಾಂತ್ವನದ ಸಂಚಾರದ ಸಂಚಾಲಕ ಶೌಕತ್ ಅಲಿ, ಟ್ರಸ್ಟಿ ಸೂಫಿಕರ್ ಖಾಸಿಂ ವಿಶೇಷ ಮುತುವರ್ಜಿ ವಹಿಸಿದ್ದರು.

https://youtu.be/wnur2cpyhuU

Share Information
Continue Reading
Advertisement
Click to comment

Leave a Reply

Your email address will not be published. Required fields are marked *