Connect with us

    DAKSHINA KANNADA

    ಪೊಲೀಸ್‌ ಇನ್‌ಸ್ಪೆಕ್ಟರ್‌ನ ಸೈಕಲನ್ನೇ ಕದ್ದ ಕಳ್ಳ!

    ಮಂಗಳೂರು, ಅಗಸ್ಟ್ 29: ನಗರದ ಪೊಲೀಸ್ ಇನ್‌ಸ್ಪೆಕ್ಟರ್‌ ಮನೆ ಆವರಣಕ್ಕೆ ನುಗ್ಗಿದ ದುಷ್ಕರ್ಮಿ ಇನ್‌ಸ್ಪೆಕ್ಟರ್ ಪುತ್ರನ ಸೈಕಲ್‌ನ್ನು ಕಳವುಗೈದ ಘಟನೆ ನಡೆದಿದೆ.

    ಸುರತ್ಕಲ್ ವೃತ್ತ ನಿರೀಕ್ಷಕಾಗಿರುವ ಶರೀಫ್ ಅವರ ಪುತ್ರನ ಸೈಕಲ್‌ನ್ನು ಕಳವು ಗೈಯ್ಯಲಾಗಿದ್ದು, ಆರೋಪಿಯ ಚಹರೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಶರೀಫ್ ಅವರು ನಗರದ ಉರ್ವ ಮಾರುಕಟ್ಟೆ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಹೊಂದಿದ್ದು, ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಇರಿಸಲಾಗಿದ್ದ ಸೈಕಲ್‌ನ್ನು ಕಳವುಗೈಯ್ಯಲಾಗಿದೆ.

    ಇದೇ ಶಂಕಿತ ಆರೋಪಿ ಪಕ್ಕದ ಇನ್ನೊಂದು ಅಪಾರ್ಟ್‌ಮೆಂಟ್  ಒಳಗೂ ನುಗ್ಗಿದ್ದು, ಅಲ್ಲಿ ಕಳವಿಗಾಗಿ ಹುಟುಕಾಟ ನಡೆಸಿದ್ದಾನೆ. ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply