LATEST NEWS
ದೇವಸ್ಥಾನದ ಅರ್ಚಕನನ್ನು ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಹತ್ಯೆ, ಹಾಡುಹಗಲೇ ನಡೆಯಿತು ಈ ಹೇಯ ಕೃತ್ಯ…..

ದೇವಸ್ಥಾನದ ಅರ್ಚಕನನ್ನು ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಹತ್ಯೆ, ಹಾಡುಹಗಲೇ ನಡೆಯಿತು ಈ ಹೇಯ ಕೃತ್ಯ…..
ರಾಜಸ್ಥಾನ, ಅಕ್ಟೋಬರ್ 09: ದೇವಸ್ಥಾನದ ಅರ್ಚಕರೋರ್ವರನ್ನು ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ ಅಮಾನವೀಯ ಹೇಯ ಕೃತ್ಯ ರಾಜಸ್ಥಾನದ ಕರೌಲಿ ಎಂಬಲ್ಲಿ ನಡೆದಿದೆ.
ದೇವಸ್ಥಾನಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ವಶಪಡಿಸಲು ಬಂದ ಲ್ಯಾಂಡ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿರುವುದೇ ಈ ಕೊಲೆಗೆ ಕಾರಣ ಎನ್ನಲಾಗಿದೆ.

ದೇವಸ್ಥಾನದ ಅರ್ಚಕ ಬಾಬುಲಾಲ್ (50) ದೇವಸ್ಥಾನದ ಜಾಗವನ್ನು ಕಬಳಿಸಲು ಬಂದ ಕೈಲಾಸ್ ಮೀನಾ ಹಾಗೂ ಆತನ ಮಕ್ಕಳನ್ನು ತಡೆದಿದ್ದು, ಈ ಸಂದರ್ಭದಲ್ಲಿ ಎಲ್ಲರೂ ಸೇರಿ ಅರ್ಚಕನ ಮೇಲೆ ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾರೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಬುಲಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿ ಕೈಲಾಸ್ ಮೀನಾ ನನ್ನು ಪೋಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಈ ಹೇಯ ಕೃತ್ಯಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾಗಲಾರಂಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ರಾಜಸ್ಥಾನ ಸರಕಾರದ ಹಾಗೂ ಮುಖ್ಯಮಂತ್ರಿ ಆಶೋಕ್ ಗೆಹ್ಲೋಟ್ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಲು ಆರಂಭಿಸಿದೆ.