LATEST NEWS
ಸುಳ್ಯದಲ್ಲೊಂದು ಅಚ್ಚರಿಯ ಕೌತುಕ : ಕಳಂಜದಲ್ಲಿ ಗಾಳಿಯಲ್ಲಿ ತೇಲಿದ ಜಲ್ಲಿಕಲ್ಲು..!!

ಸುಳ್ಯ: ಈ ಪ್ರಕೃತಿಯಲ್ಲಿ ದಿನಾ ಒಂದಷ್ಟು ಪವಾಡಗಳು, ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತಿವೆ. ಇದೀಗ ಇಂತಹುದೇ ಅಚ್ಚರಿಯ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿನ ತಂಟೆಪ್ಪಾಡಿಯ ಪುಟ್ಟಣ್ಣ ಗೌಡ ಎಂಬವರ ಮಗಳು ಧನುಶ್ರೀ ಕಳೆದ ಶುಕ್ರವಾರ ಎಂದಿನಂತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಲೇಜಿಗೆ ತೆರಳಲು ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಚ್ಚರಿಯ ದೃಶ್ಯವೊಂದು ಕಂಡಿದೆ. ರಸ್ತೆಯಲ್ಲಿದ್ದ ಜಲ್ಲಿಕಲ್ಲೊಂದು ಗಾಳಿಯಲ್ಲಿ ತೇಲಾಡುತ್ತಿರುವುದು ಕಂಡಿದೆ. ಈ ವಿಸ್ಮಯದ ದೃಶ್ಯ ನೋಡಿದ ಆಕೆ ಕೂಡಲೇ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ಈ ಜಲ್ಲಿ ಕಲ್ಲು ಕೆಲವು ಸೆಕೆಂಡ್ ಗಳ ಕಾಲ ಗಾಳಿಯಲ್ಲಿ ತೇಲಾಡಿದೆ ಎಂದು ಹೇಳಲಾಗಿದೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
