KARNATAKA
ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿಯನ್ನೇ ಕೊಂದ ಮಗ

ದಾವಣಗೆರೆ, ಏಪ್ರಿಲ್ 11: ರಾಜ್ಯದಲ್ಲಿ ಮತ್ತೊಂದು ಘೋರ ಕೃತ್ಯವೊಂದು ನಡೆದಿದ್ದು. ಕುಡಿಯಲು ಹಣ ನೀಡಿಲ್ಲ ಎಂದು ಪಾಪಿ ಪುತ್ರನೊಬ್ಬ ತಾಯಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ದಾವಣಗೆರೆ ತಾಲೂಕು ಐಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಕುಡಿಯಲು ಹಣ ನೀಡಿಲ್ಲ ಎಂದು ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ್ದಾನೆ. ದೊಣ್ಣೆಯಿಂದ ಹೊಡೆದು ರತ್ನಾಬಾಯಿ(62) ಅವರನ್ನು ಪುತ್ರ ಕೊಲೆ ಮಾಡಿದ್ದಾನೆ

ಕುಡಿತದ ಚಟಕ್ಕೆ ಬಿದ್ದಿದ್ದ ಪುತ್ರ ರಾಘವೇಂದ್ರ ನಾಯ್ ಕುಡಿಯಲು ಹಣ ನೀಡುವಂತೆ ತಾಯಿಯನ್ನು ಪೀಡಿಸುತ್ತಿದ್ದ ತಾಯಿ ಹಣ ಇಲ್ಲ ಎಂದು ಹೇಳಿದ್ದಕ್ಕೆ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನ ಆರೋಪಿ ರಾಘವೇಂದ್ರ ನಾಯ್ಕನನ್ನು ಪೊಲೀಸರು ಬಂಧಿಸಿದ್ಧಾರೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2 Comments