LATEST NEWS
ಕೃಷ್ಣಾಪುರ ಮಠದಲ್ಲಿ ಪರ್ಯಾಯದ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ
ಉಡುಪಿ, ಜುಲೈ 11: ಉಡುಪಿಯ ಕೃಷ್ಣಾಪುರ ಮಠದ ಪರ್ಯಾಯದ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ ನಡೆಯಿತು. ಕಟ್ಟಿಗೆಗಳನ್ನು ಹೊತ್ತು ಶ್ರೀ ಕೃಷ್ಣ ಮಠದ ಸುತ್ತು ಪ್ರದಕ್ಷಿಣೆ ಬಂದು ಬಳಿಕ ಭೋಜನ ಶಾಲೆಯ ಹಿಂಭಾಗದಲ್ಲಿ ಜೋಡಿಸಲಾಯಿತು.
ಬಳಿಕ ಮಠದ ಆಸ್ಥಾನ ಪುರೋಹಿತರು ತಂತ್ರಿಗಳು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ನೂತನ ಪರ್ಯಾಯಕ್ಕೂ ಮುನ್ನ ನಾಲ್ಕು ಮುಹೂರ್ತಗಳು ನಡೆಯುತ್ತವೆ. ಭಾಳೆ ಭತ್ತ ಬಳಿಕ ಕಟ್ಟಿಗೆ ಮುಹೂರ್ತ ನಡೆಯುತ್ತೆ. ಕಟ್ಟಿಗೆಯನ್ನು ರಥದಂತೆ ಜೋಡಿಸಿ ಕಟ್ಟಲಾಗುತ್ತೆ ಇದನ್ನು ನೋಡೋದೇ ಒಂದು ಆಕರ್ಷಣೆ.
ಈ ಕಾರಣದಿಂದಲೇ ಕೃಷ್ಣ ಮಠಕ್ಕೆ ಆಗಮಿಸುವ ಪ್ರವಾಸಿಗರಿಗೆ ಕಟ್ಟಿಗೆ ರಥ ಆಕರ್ಷಣೆಯ ಬಿಂದು. ಮುಂದಿನ ಪರ್ಯಾಯ ಪೀಠವೇರುವ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥರು ಮುಹೂರ್ತದ ಬಳಿಕ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಠದ ಶಿಷ್ಯವೃಂದ ಅತಿಥಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು