DAKSHINA KANNADA
ಮುಲ್ಕಿ ಬಸ್ಸು ನಿಲ್ದಾಣದ ಬಳಿ ಬಸ್ ಗೆ ಪಿಕಪ್ ಡಿಕ್ಕಿ-ಪಿಕಪ್ ನಲ್ಲಿದ್ದ ಇಬ್ಬರು ಪಾರು..!

ಮುಲ್ಕಿ, ಆಗಸ್ಟ್ 07: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಹೊರವಲಯದ ಮುಲ್ಕಿ ಬಸ್ಸು ನಿಲ್ದಾಣದ ಬಳಿಯಲ್ಲಿ ಬಸ್ ಗೆ ಪಿಕಪ್ ಡಿಕ್ಕಿಯಾಗಿ ಪಿಕಪ್ ನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಕಣ್ಣೂರಿನಿಂದ ಮಲ್ಪೆ ಕಡೆಗೆ ಮೀನು ಲೋಡ್ ಮಾಡಿಕೊಂಡು ಬರುತ್ತಿದ್ದ ಪಿಕಪ್ ಮುಲ್ಕಿ ಬಸ್ಸು ನಿಲ್ದಾಣದ ಜಂಕ್ಷನ್ ತಲುಪುತ್ತಿದ್ದಂತೆ ಕಿನ್ನಿಗೋಳಿ ಕಡೆಗೆ ಹೋಗಲು ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಪಿಕಪ್ ಎದುರು ಭಾಗ ಜಖಂಗೊಂಡಿದ್ದು ಅದರಲ್ಲಿದ್ದ ಕೇರಳ ಕಣ್ಣೂರು ನಿವಾಸಿಗಳಾದ ಚಾಲಕ ಲುಕ್ಮಾನ್ ಹಾಗೂ ನಿರ್ವಾಹಕ ರಂಜಾದ್ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅಪಘಾತದಿಂದ ಬಸ್ ಕೂಡ ಜಖಂ ಗೊಂಡಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.