BELTHANGADI
ಬೆಳ್ತಂಗಡಿ : ಇಷ್ಟಪಟ್ಟ ಹುಡುಗಿಯನ್ನೇ ಮದುವೆಯಾಗಿ ಇಹಲೋಕ ತ್ಯಜಿಸಿದ ನವವಿವಾಹಿತ..!
ಇಷ್ಟಪಟ್ಟ ಹುಡುಗಿಯನ್ನೇ ಮದುವೆಯಾಗಿದ್ದ ಬೆಳ್ತಂಗಡಿ ಯ ನವ ವಿವಾಹಿತ ಇದೀಗ ನಿಗೂಢ ಕಾರಣಕ್ಕೆ ಮಂಗಳೂರು ನಗರದಲ್ಲಿ ಇಹಲೋಕ ತ್ಯಜಿಸಿದ ದಾರುಣ ಘಟನೆ ನಡೆದಿದೆ.
ಬೆಳ್ತಂಗಡಿ: ಇಷ್ಟಪಟ್ಟ ಹುಡುಗಿಯನ್ನೇ ಮದುವೆಯಾಗಿದ್ದ ಬೆಳ್ತಂಗಡಿ ಯ ನವ ವಿವಾಹಿತ ಇದೀಗ ನಿಗೂಢ ಕಾರಣಕ್ಕೆ ಮಂಗಳೂರು ನಗರದಲ್ಲಿ ಇಹಲೋಕ ತ್ಯಜಿಸಿದ ದಾರುಣ ಘಟನೆ ನಡೆದಿದೆ.
ತಾಲೂಕಿನ ಮಲವಂತಿಗೆ ಗ್ರಾಮದ ಪರಾರಿ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರ ಪುತ್ರ ಪ್ರದೀಪ್ (32) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾರೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಪ್ರದೀಪ್ ಬುಧವಾರ ಮಂಗಳೂರಿನ ಬಾಡಿಗೆ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಜೀವಾಂತ್ಯ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಹೋಟೆಲೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದ ಪ್ರದೀಪ್ ಮೂರು ತಿಂಗಳ ಹಿಂದೆ ತಾನು ಪ್ರೀತಿಸಿದ ಯುವತಿ ಜತೆ ಸ್ಥಳೀಯ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದರು. ದಂಪತಿ ಮಂಗಳೂರಲ್ಲಿ ವಾಸವಾಗಿದ್ದು ಅನೋನ್ಯವಾಗಿದ್ದರು ಎನ್ನಲಾಗಿದೆ. ಡಿಸೆಂಬರ್ 3ರಂದು ಮಲವಂತಿಗೆಯ ಮನೆಗೂ ಬಂದು ಹೋಗಿದ್ದರು. ಆದ್ರೆ ಬುಧವಾರ ಸಂಜೆ ಮಂಗಳೂರಿನ ಬಾಡಿಗೆ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮಂಗಳೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.