LATEST NEWS
ಭಾರತದ ಇತಿಹಾಸದಲ್ಲಿ ಹೊಸಮೈಲಿಗಲ್ಲು, ಮುಂಬೈಯ 22 ಕಿ ಮೀ ಉದ್ದದ ಅಟಲ್ ಸೇತು ಇಂದು ಲೋಕಾರ್ಪಣೆ..!

ಮುಂಬೈಯಲ್ಲಿ ನಿರ್ಮಾಣಗೊಂಡ ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಜ.12) ಲೋಕಾರ್ಪಣೆಗೊಳಿಸಲಿದ್ದಾರೆ. ಸೇತುವೆ ನಿರ್ಮಾಣಕ್ಕೆ 18,000 ಕೋಟಿ ರೂಪಾಯಿ ವೆಚ್ಚದ 21.8 ಕಿ.ಮೀ. ಉದ್ದದ ಈ ಸೇತುವೆ ಮಾರ್ಗಕ್ಕೆ ಅಟಲ್ ಸೇತು ಎಂದು ನಾಮಕರಣ ಮಾಡಲಾಗಿದೆ.
ಮುಂಬೈ : ನರೇಂದ್ರ ಮೋದಿ ಭಾರತದ ಪ್ರಧಾನಿಯಾದ ಮೇಲೆ ದೇಶದ ಚಿತ್ರಣವೇ ಬದಲಾಗಿದೆ. ದೇಶದ ನರನಾಡಿಗಳಾದ ರಸ್ತೆಗಳು ದೇಶದ ಸರ್ವತೋಮುಖ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ದೃಷ್ಟಿಕೋನ ಮಹತ್ವ ಪೂರ್ಣವಾಗಿದೆ.

ಇದೀಗ ಭಾರತ ಹೊಸ ಮೈಲಿಗಲ್ಲು ದಾಖಲಿಸುವ ಸಮಯ ಬಂದಿದೆ.ಮುಂಬೈಯಲ್ಲಿ ನಿರ್ಮಾಣಗೊಂಡ ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಜ.12) ಲೋಕಾರ್ಪಣೆಗೊಳಿಸಲಿದ್ದಾರೆ. ಸೇತುವೆ ನಿರ್ಮಾಣಕ್ಕೆ 18,000 ಕೋಟಿ ರೂಪಾಯಿ ವೆಚ್ಚದ 21.8 ಕಿ.ಮೀ. ಉದ್ದದ ಈ ಸೇತುವೆ ಮಾರ್ಗಕ್ಕೆ ಅಟಲ್ ಸೇತು ಎಂದು ನಾಮಕರಣ ಮಾಡಲಾಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಈ ಸೇತುವೆಗೆ ಇಡಲಾಗಿದೆ, ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನ ಸೆವ್ರಿಯಿಂದ ಆರಂಭವಾಗಿ ರಾಯಗಡ ಜಿಲ್ಲೆಯ ಉರಾನ್ ತಾಲೂಕಿನಲ್ಲಿ ಕೊನೆಗೊಳ್ಳುತ್ತದೆ.ಅಟಲ್ ಸೇತು 21.8 ಕಿಮೀ ಉದ್ದ ಇದ್ದು, ಸಮುದ್ರದ ಮೇಲೆ 16.5 ಕಿಮೀ ಉದ್ದ ಮತ್ತು ನೆಲದ ಮೇಲೆ 5.5 ಕಿಮೀ ಉದ್ದವನ್ನು ಹೊಂದಿದೆ. ಅಟಲ್ ಸೇತು ನಿರ್ಮಾಣಕ್ಕೆ 177,903 ಮೆಟ್ರಿಕ್ ಟನ್ ಉಕ್ಕು ಮತ್ತು 504,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.
ಮಹಾರಾಷ್ಟ್ರ ಸರ್ಕಾರವು ಎಂಟಿಎಚ್‌ಎಲ್‌ನಲ್ಲಿ ಕಾರುಗಳಿಗೆ 250 ರೂಪಾಯಿ ಏಕಮುಖ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ನಾಲ್ಕು ಚಕ್ರಗಳ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿಮೀ ಆಗಿದ್ದು ಮಲ್ಟಿ-ಆಕ್ಸಲ್ ಭಾರೀ ವಾಹನಗಳು, ಟ್ರಕ್‌ಗಳು ಮತ್ತು ಬಸ್‌ಗಳು , ಮೋಟಾರ್ ಬೈಕ್, ಆಟೋರಿಕ್ಷಾ ಮತ್ತು ಟ್ರಾಕ್ಟರ್‌ಗಳಿಗೆ ಸೇತುವೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.ಈ ವಾಹನಗಳು ಮುಂಬೈ ಪೋರ್ಟ್-ಸೆವ್ರಿ ಎಕ್ಸಿಟ್ (ಎಕ್ಸಿಟ್ 1 ಸಿ) ಅನ್ನು ಬಳಸಬೇಕಾಗುತ್ತದೆ.
ಸೇತುವೆಯು ಪ್ರಸ್ತುತ ಐರೋಲಿ-ಮುಲುಂಡ್ ಕನೆಕ್ಟರ್‌ನಿಂದ ಒಂದು ಮತ್ತು ವಾಶಿ ಕನೆಕ್ಟರ್‌ನಿಂದ ಇನ್ನೊಂದು ಎರಡು ಪ್ರವೇಶ ದ್ವಾರಗಳನ್ನು ಹೊಂದಿದೆ.ಪ್ರಸ್ತುತ ಈ ಎರಡು ಪ್ರದೇಶಗಳ ನಡುವಿನ ಪ್ರಯಾಣ 2 ಗಂಟೆಗಳದ್ದು.ಸೇತುವೆಯು ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣವನ್ನು ಕೇವಲ 20 ನಿಮಿಷಗಳಿಗೆ ಕಡಿಮೆ ಮಾಡಿದೆ.