LATEST NEWS
ನೋಯ್ಡಾ – ಫ್ಯಾಷನ್ ಶೋ ವೇಳೆ ಕಬ್ಬಿಣದ ಟ್ರಸ್ ಬಿದ್ದು ಮಾಡೆಲ್ ಸಾವು…!!

ನೋಯ್ಡಾ ಜೂನ್ 12: ಫ್ಯಾಶನ್ ಶೋ ನಡೆಯುತ್ತಿರುವ ವೇಳೆ ಲೈಟ್ ಗಳಿಗಾಗಿ ಹಾಕಲಾಗಿದ್ದ ಕಬ್ಬಿಣದ ಟ್ರಸ್ ಬಿದ್ದು ಮಾಡೆಲ್ ಒಬ್ಬಳು ಸಾವನಪ್ಪಿರುವ ಘಟನೆ ನೋಯ್ಡಾದ ಫಿಲ್ಮ್ ಸಿಟಿಯಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಲಕ್ಷ್ಮಿ ಸ್ಟುಡಿಯೋದಲ್ಲಿ ಫ್ಯಾಷನ್ ಶೋ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಗ್ರೇಟರ್ ನೋಯ್ಡಾದ ಗೌರ್ ಸಿಟಿ-2 ನಿವಾಸಿ 24 ವರ್ಷ ಪ್ರಾಯದ ವಂಶಿಕಾ ಚೋಪ್ರಾ ಎಂದು ಗುರುತಿಸಲಾಗಿದ್ದು, ಆಗ್ರಾ ನಿವಾಸಿ ಬಾಬಿ ರಾಜ್ ಘಟನೆಯಲ್ಲಿ ಗಾಯಗೊಂಡಿದ್ದಾರೆ. ರಾಜ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫ್ಯಾಷನ್ ಶೋ ಆಯೋಜಕರು ಹಾಗೂ ಲೈಟಿಂಗ್ ಟ್ರಸ್ ಅಳವಡಿಸಿದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದಾಗ ಸ್ಟುಡಿಯೋದಲ್ಲಿ ಸುಮಾರು 150 ಮಂದಿ ಇದ್ದರು ಎನ್ನಲಾಗಿದೆ.