Connect with us

DAKSHINA KANNADA

ಕಲ್ಲಡ್ಕ ಪ್ರಭಾಕರ ಭಟ್ ರನ್ನು ಕೂಡಲೇ ಬಂಧಿಸಿ: ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ಆಗ್ರಹ

ಮಂಗಳೂರು ; ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದು ಭಟ್ ಅವರನ್ನು ಬಂಧಿಸುವಂತೆ ಜಾತ್ಯತೀತ ಪಕ್ಷಗಳು, ಸಮಾನ ಮನಸ್ಕರರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.

 

ಈ ಬಗ್ಗೆ ಕಾಂಗ್ರೆಸ್, ಸಿಪಿಐಎಂ, ದಲಿತ ಸಂಘರ್ಷ ಸಮಿತಿ ರೈತ ಸಂಘ ಗಳ ಸಮನ್ನಯ ಸಮಿತಿಯ ಪತ್ರಿಕಾಗೋಷ್ಠಿ ಮಂಗಳೂರಿನಲ್ಲಿ ನಡೆಯಿತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಂಟಿ ವೇದಿಕೆಯ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಪದಾಧಿಕಾರಿಗಳು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಪ್ರಭಾಕರ್ ಭಟ್ ಹೇಳಿಕೆ ಖಂಡನೀಯವಾಗಿದೆ. ಹೆಣ್ಣು ಮಕ್ಕಳಿರುವ ಯಾವುದೇ ಜಾತಿ ಧರ್ಮದವರು ಇದನ್ನ ಒಪ್ಪಲು ಸಾಧ್ಯವಿಲ್ಲವೆಂದ ಅವರು ಇದು ಸಮಗ್ರ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ಅವರ ಮನಸ್ಸಿಗೆ ನೋವಾಗುವ ವಿಚಾರವನ್ನ ನಾನು ಖಂಡಿಸುತ್ತೇನೆ ಎಂದರು. ಭಟ್ ಅವರು ಅನೇಕ ಕಡೆಗಳಲ್ಲಿ ಪ್ರಚೋದನಾಕಾರಿ ಮಾತುಗಳನ್ನ ಆಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಮೇಲೇ ಇಂತವರಿಗೆ ಏನು ಮಾಡ್ಬೇಕು ಎಂದು ಗೊತ್ತಾಗುತ್ತಿಲ್ಲ, ಹಾಗಾಗಿ ಕೋಮು ಪ್ರಚೋದನೆ ಮಾಡುವ ನಿಟ್ಟಿನಲ್ಲಿ ಇಂತಹ ಭಾಷಣ ಮಾಡಿದ್ದಾರೆ. ಬಂಧಿಸಬೇಕು ಎಂಬ ಒತ್ತಡಗಳು ಕೇಳಿ ಬರುತ್ತಿದ್ದು, ವಿಳಂಬ ಮಾಡದೆ ಬಂಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಇದಕ್ಕೆ ನಾವು ಈ ಜಿಲ್ಲೆಯವರು ಜನರು ನಮ್ಮ ಜೊತೆ ಸಹಮತ ಹೊಂದಿದ್ದಾರೆ ಎಂಬ ಭಾವನೆ ಇದೆ. ಹಿನಾಯ ಸೋಲು ಕಂಡ ನಂತರ ಹತಾಶ ಮನೋಭಾವ ದಿಂದ ಈ ರೀತಿ ಹೇಳಿದ್ದಾರೆ. ಇಂತಹ ಭಾಷಣ ಮಾಡುವ ಮೂಲಕ ರಾಜಕೀಯ ಮಾಡಲು ಬಳಸುತ್ತಿದ್ದಾರೆ. ಹೆಣ್ಣು ಮಕ್ಕಳ ಮಾನ ಮರ್ಯಾದೆಗೆ ಕುಂದು ತರುವ ರೀತಿಯ ಭಾಷಣ ಮಾಡಿದ್ದಾರೆ. ಈಗಾಗಲೇ ಪ್ರಕರಣ, ಜಾಮೀನು ರಹಿತ ಸೆಕ್ಷನ್ ಗಳನ್ನ ಹಾಕಿದ್ದಾರೆ, ಅದನ್ನ ಕೂಡಲೇ ಗಮನಿಸಿ ಸರಕಾರ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ವೇದಿಕೆಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಕಲ್ಲಡ್ಕ ಪ್ರಭಾಕರ ಭಟ್ ಅವರ ಶೀಘ್ರ ಬಂಧನವಾಗಲಿ. ಯಾವುದೇ ಕಾರಣಕ್ಕೂ ಅವರಿಗೆ ಜಾಮೀನು ಸಿಗಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್, ದಸಂಸ ರಾಜ್ಯ ಸಂಚಾಲಕ ಎಂ.ದೇವದಾಸ್, ಹಿರಿಯ ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ, ತುಳು ಪರಿಷತ್ ಕೋಶಾಧಿಕಾರಿ ಸುಬೋದ್ ಆಳ್ವ, ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಮತ್ತಿತರರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *