LATEST NEWS
ಮಂಗಳೂರು – ಜಡ್ಜ್ ಬೈದರೆಂದು ನ್ಯಾಯಾಲಯದ ಆವರಣದಲ್ಲಿ ಯುವ ವಕೀಲರಿಂದ ಪ್ರತಿಭಟನೆ

ಮಂಗಳೂರು ಎಪ್ರಿಲ್ 3: ಪ್ರಕರಣದ ವಿಚಾರಣೆಯ ಸಂದರ್ಭ ಯುವ ವಕಿಲೇಯೊಬ್ಬರಿಗೆ ನ್ಯಾಯಾಧೀಶರು ಬೈದಿದ್ದಾರೆ ಎಂಬ ಕಾರಣಕ್ಕೆ ಯುವ ವಕೀಲರು ಕೋರ್ಟ್ ಆವರಣದಲ್ಲಿ ಮುಖಕ್ಕೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ 1ನೇ ಸಿಜೆಎಂ ಕೋರ್ಟ್ ನ್ಯಾಯಾಧೀಶರು ಯುವ ವಕೀಲೆಯನ್ನು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬೈದಿದ್ದಾರೆ ಎಂದು ಹೇಳಲಾಗಿದೆ. ಈ ಆರೋಪದಲ್ಲಿ ಯುವ ವಕೀಲರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಕೋರ್ಟ್ ಕಟ್ಟಡದ ಎದುರಲ್ಲಿ ಮುಖಕ್ಕೆ ಕಪ್ಪು ಬಟ್ಟೆ ತೊಟ್ಟು ಪ್ರತಿಭಟನೆ ನಡೆಸಿದ್ದಾರೆ. ವಕೀಲರು ಕೆಲ ಹೊತ್ತು ಮೌನ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಜಡ್ಜ್ ಮಾತಿನಿಂದ ನೊಂದ ಜೂನಿಯರ್ ವಕೀಲರು ಸೇರಿ ಇಂದು ಬೆಳಗ್ಗೆ ಕೆಲ ಹೊತ್ತು ಮೌನ ಪ್ರತಿಭಟನೆ ನಡೆಸಿ ಜಿಲ್ಲಾ ನ್ಯಾಯಾಧೀಶರ ಗಮನ ಸೆಳೆದಿದ್ದಾರೆ.
