Connect with us

    FILM

    ಇಲಿ ಸಾಯಿಸೋಕು ಹಿಂಜರಿಯುತ್ತಿದ್ದ ಹುಡುಗಿ ಅವಳು, ಕೊಲೆ ಮಾಡ್ತಾಳೆ ಅಂದ್ರೆ ಅದು ಸುಳ್ಳು: ಮಾಜಿ ಪತಿ ಸಂಜಯ್‌ ಸಿಂಗ್‌

    ಬೆಂಗಳೂರು: ಇಲಿ ಸಾಯಿಸಲು ಹಿಂಜರಿಯುತ್ತಿದ್ದ ಹುಡುಗಿ ಅವಳು. ಪವಿತ್ರಾ ಗೌಡ ಒಬ್ಬರನ್ನ ಕೊಲೆ ಮಾಡುತ್ತಾಳೆ ಅಂದ್ರೆ ಅದು ಸುಳ್ಳು ಎಂದು ಮಾಜಿ ಪತಿ ಸಂಜಯ್‌ ಸಿಂಗ್‌ ಹೇಳಿದ್ದಾರೆ.

    ಉತ್ತರ ಪ್ರದೇಶ ಮೂಲದ ಸಂಜಯ್‌ ಸಿಂಗ್‌ ಮತ್ತು ಪವಿತ್ರಾ ಗೌಡ ಪ್ರೀತಿಸಿ ಮದುವೆಯಾಗಿದ್ದರು. ಮಗಳು ಹುಟ್ಟಿದ ನಂತರ ಸಂಜಯ್‌ ಸಿಂಗ್‌ ಅವರನ್ನು ದೂರ ಮಾಡತೊಡಗಿದ ಪವಿತ್ರಾ ಗೌಡ ಕೊನೆಗೆ ಡಿವೋರ್ಸ್‌ ಕೇಳಿದ್ದರು. ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್‌ ಸಿಂಗ್‌ ಸದ್ಯ ಉತ್ತರ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರು ಮಾಧ್ಯಮದ ಜೊತೆ ಮಾತನಾಡಿ ಪವಿತ್ರಾಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ.

    ಸಂಜಯ್‌ ಸಿಂಗ್‌ ಎನಂದ್ರು ಗೊತ್ತಾ?
    ನನ್ನದು ಮತ್ತು ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದು 12 ವರ್ಷ ಆಗಿದೆ. ಇವತ್ತು ನನಗೆ ಕೊಲೆ ಮಾಡಿದ ವಿಚಾರ ಗೊತ್ತಾಯಿತು. ಮಗಳ ಬಗ್ಗೆ ಯೋಚನೆ ಬಂತು. ಅದಕ್ಕೆ ಏನು ಅಂತ ಕೇಳೋಣ ಅಂದುಕೊಂಡೆ. ನಾನು ಅವರಿಗೆ ಫೋನ್ ಮಾಡಲ್ಲ. ಅವರ ಕಡೆಯಿಂದಲೂ ನನಗೆ ಯಾವುದೇ ಫೋನ್‌ ಬರಲ್ಲ.

    ನಮ್ಮ ಅಣ್ಣ, ತಮ್ಮ ಎಲ್ಲರೂ ವಿದೇಶದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ನಮ್ಮದು ಒಂದು ಶಾಲೆಯಿದ್ದು ಅದನ್ನು ನಾನು ನೋಡಿಕೊಳ್ಳುತ್ತಿದ್ದೇನೆ. 2002 ರಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. ಪವಿತ್ರಾ ಗೌಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನಾವಿಬ್ಬರು ಪ್ರೀತಿಸಿ ಮದುವೆಯಾದೆವು.

    ಮದುವೆಯಾಗಿ ಮೂರನೇ ವರ್ಷಕ್ಕೆ ನನ್ನ ಮಗಳು ಹುಟ್ಟಿದ್ದಳು. ಆಗ ಪವಿತ್ರ ಗೌಡ ಫಿಲ್ಮ್ ಇಂಡಸ್ಟ್ರಿ  ಸೇರಿದ್ದಳು. ಆ ಬಳಿಕ ನಮ್ಮಿಬ್ಬರ ನಡುವೆ ಅಂತರ ಆರಂಭವಾಯ್ತು. ಆಮೇಲೆ ಅವಳು ನನ್ನ ಮೇಲೆ ಡಿವೋರ್ಸ್‌ ಕೇಸ್‌ ಫೈಲ್‌ ಮಾಡಿದಳು.

    2013ರಲ್ಲಿ ನಮ್ಮ ಡಿವೋರ್ಸ್‌ ಆಯ್ತು. ಡಿವೋರ್ಸ್ ಮೊದಲೇ ನಾವಿಬ್ಬರು ಒಂದು ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿದ್ದೆವು. ಗಂಡ ಹೆಂಡತಿ ಮಧ್ಯೆ ಕೆಲ ವಿಚಾರಕ್ಕೆ ಸಣ್ಣ ಸಣ್ಣ ಜಗಳ ಆಗುತಿತ್ತಿತ್ತು. ಅವಳು ಡಿವೋರ್ಸ್‌ ಫೈಲ್‌ ಮಾಡಿದಾಗ ನಾನು ಮುಂಬೈನಲ್ಲಿದ್ದೆ. ಆಗ ಅವಳು ದರ್ಶನ್‌ ಜೊತೆ ಸಂಬಂಧದಲ್ಲಿ ಇದ್ದಾಳೆ ಎಂಬ ವಿಚಾರ ಗೊತ್ತಾಯ್ತು.

    ಮಗಳ ಹತ್ತಿರ ವರ್ಷಕ್ಕೆ ಒಂದು ಸಾರಿ, ಎರಡು ವರ್ಷಕ್ಕೆ ಒಂದು ಸಾರಿ ಫೋನ್‌ನಲ್ಲಿ ಮಾತನಾಡುತ್ತೇನೆ. ಆದರೆ ಡೈರೆಕ್ಟ್ ಆಗಿ ಮಾತಾಡಲು ಆಗುವುದಿಲ್ಲ. ಆಕೆಯ ಫೋನ್‌ ನಂಬರ್‌ ನನ್ನ ಬಳಿ ಇಲ್ಲ. ನಮ್ಮ ಅತ್ತೆ ಮಾವರಿಗೆ ಫೋನ್ ಮಾಡಿದರೆ ನನ್ನ ಮಗಳ ಜೊತೆ ಮಾತನಾಡಬಹುದು.

    ನಾನು ಅವಳನ್ನ ಚಿನ್ನು ಅಂತ ಕರೆಯುತ್ತಿದ್ದೆ. ಅವಳು ಸಂಜಯ್ ಅನ್ನುತ್ತಿದ್ದಳು. ನಾವಿಬ್ಬರು ಜೊತೆಗೆ ಇರಲು ಸಾಧ್ಯವಿಲ್ಲ. ನಾನು ಮತ್ತು ದರ್ಶನ್ ಗಂಡ ಹೆಂಡತಿ ಆಗಲು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದಳು. ಅದಕ್ಕೆ ನನ್ನಿಂದ ಏನು ಆಗಬೇಕು ಎಂದು ಕೇಳಿದೆ. ಅದಕ್ಕೆ ಡಿವೋರ್ಸ್‌ ಕೊಡು ಎಂದು ಹೇಳಿದ್ದಳು. ನಾನು ಸರಿ ಎಂದು ಡಿವೋರ್ಸ್‌ ಕೊಟ್ಟೆ. ಬಳಿಕ ಆಕೆ ದರ್ಶನ್‌ ಜೊತೆ ಜೀವನ ಮಾಡಲು ಶುರು ಮಾಡಿದಳು.

    ಆ ಬಳಿಕ ಆಕೆ ಮದುವೆ ಆಗಿದ್ದಾಳೋ ಇಲ್ವೋ ಗೊತ್ತಿಲ್ಲ. ಯಾಕೆಂದರೆ ನನಗೆ ಅವರ ಮೇಲೆ ಯಾವುದೇ ಆಸಕ್ತಿ ಇಲ್ಲ. ಆದರೆ ಬಹಳ‌ ದಿನಗಳ ಬಳಿಕ ಒಮ್ಮೆ 2017, 2018ರಲ್ಲಿ ಮಗಳನ್ನು ನೋಡಲು ನಾನು ಬೆಂಗಳೂರಿನಲ್ಲಿ ಭೇಟಿಯಾದೆ. ಆದಾದ ನಂತರ ನಾನು ಇಲ್ಲಿಯವರೆಗೂ ಮಗಳನ್ನು ನೋಡಲೇ ಇಲ್ಲ. ಅವರ‌ ಮೂಡ್‌ ಅನ್ನು ಯಾಕೆ ಹಾಳಮಾಡಬೇಕು ಅಂತ ಸುಮ್ಮನಾದೆ. ನಾನು ಮತ್ತು ನನ್ನ ಮಗಳ‌ ಮಧ್ಯೆ 12 ವರ್ಷದಲ್ಲಿ ಒಂದೆರೆಡು ಬಾರಿ ಅಷ್ಟೇ ಮಾತಾನಾಡಿದ್ದೇನೆ.

    ಪವಿತ್ರಾಗೆ ಕಷ್ಟ ಬಂದಾಗ ದರ್ಶನ್‌ ಹತ್ತಿರ ಹೋಗಿದ್ದಾಳೆ. ಅವರೊಬ್ಬ ಗಂಡನಾಗಿ ಅವರ ಸ್ಟೆಪ್ ತೆಗೆದುಕೊಳ್ಳಲೇಬೇಕು. ಆದರೆ ಇಲ್ಲಿ ಆ ಸ್ಟೆಪ್ ತಪ್ಪಾಗಿದೆ. ಇದರಲ್ಲಿ ಪವಿತ್ರ ಗೌಡರ ಒಂದೇ ‌‌ಒಂದು ತಪ್ಪು ಘಟನೆ ನಡೆದ ಜಾಗದಲ್ಲಿ‌ ಇದ್ದಿದ್ದು. ಗಂಡ ಬಾ ಆ ಜಾಗಕ್ಕೆ‌ಹೋಗಿ ಬರೋಣ ಅಂತ ಕರೆದಿರಬಹುದು. ಹೋಗಿಲ್ಲ ಅಂದರೆ ದರ್ಶನ್ ಅವರು ಗೊತ್ತಲ್ವಾ ಯಾವ ತರ ಮನುಷ್ಯ ಅಂತಾ.

    ನಾನು ಮತ್ತು ದರ್ಶನ್‌ ಇಲ್ಲಿಯವರೆಗೂ ಒಂದು ಬಾರಿಯೂ ಫೇಸ್‌ ಟು ಫೇಸ್‌ ಭೇಟಿಯಾಗಿಲ್ಲ. ಪವಿತ್ರ ಗೌಡ ಫಿಲ್ಮ್ ಇಂಡಸ್ಟ್ರಿಗೆ ಬರುವ ಮುನ್ನ ನಾನು ದರ್ಶನ್ ಅವರ ಅಭಿಮಾನಿಯಾಗಿದ್ದೆ. ಆದರೆ ಎಲ್ಲಾ ಘಟನೆ ಬಳಿಕ ನಾನು ಅವರ ಫಿಲ್ಮ್ ನೋಡುವುದನ್ನೇ ಬಿಟ್ಟೆ.

    ಈಗ ದರ್ಶನ್ ಅವರು ಹೇಳಿರುವ ಕಾರಣಕ್ಕೆ ಅವರು ಸ್ಥಳಕ್ಕೆ ಹೋಗಿರಬೇಕು.‌ ಇದರಿಂದ ಪವಿತ್ರ ಗೌಡ ಸಿಕ್ಕಿಹಾಕಿಕೊಂಡಿದ್ದಾರೆ. ಕಷ್ಟ ಬಂದಾಗ ಗಂಡನಿಗೆ ಹೇಳಿಕೊಂಡಿದ್ದಾರೆ. ಆದರೆ ಇವರು ತಪ್ಪು ಹೆಜ್ಜೆ‌ ಇಟ್ಟಿದ್ದಾರೆ. ಇದರಲ್ಲಿ ಪವಿತ್ರ ಗೌಡ ಸಮಸ್ಯೆಗೆ ಸಿಲುಕಿದ್ದಾರೆ. ನನಗೆ ಪವಿತ್ರ ಗೌಡ ತುಂಬಾ ಚೆನ್ನಾಗಿ ಗೊತ್ತು. ಬೈ ಮಿಸ್ ಇದು ಆಗಿರಬಹುದು. ಅವಳು ಮೆದುಳಿನಿಂದ ಬಹಳ ಸ್ಟ್ರಾಂಗ್ ಇದ್ದಾಳೆ. ಹೃದಯದಿಂದ ಬಹಳ ಸಾಫ್ಟ್ ಇದ್ದಾಳೆ. ಏನೋ‌ ತಪ್ಪು‌ಆಗಿದೆ. ಇಲಿ ಸಾಯಿಸೋಕು ಹಿಂಜರಿಯುತ್ತಿದ್ದ ಹುಡುಗಿ ಅವಳು. ಒಬ್ಬರನ್ನ ಕೊಲೆ ಮಾಡ್ತಾರೆ ಇದು ಸುಳ್ಳು.

    Share Information
    Advertisement
    Click to comment

    You must be logged in to post a comment Login

    Leave a Reply