DAKSHINA KANNADA
ಉಳ್ಳಾಲದಲ್ಲಿ ಹೆದ್ದಾರಿ ಕಾಯುತ್ತಿದ್ದ ಹೈವೇ ಪೆಟ್ರೋಲ್ ಸ್ವಾಡ್ ಗೆ ಕಾರು ಡಿಕ್ಕಿ : ಪೊಲಿಸ್ ಗಂಭೀರ..!

ಉಳ್ಳಾಲ, ಅಕ್ಟೋಬರ್ 02: ಹೈವೇ ಪೆಟ್ರೊಲ್ ಸ್ವಾಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ಸಿಬಂದಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು ಡಿವೈಡರ್ ಮೇಲೆ ಎಸೆಯಲ್ಪಟ್ಟ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ತೊಕ್ಕೊಟ್ಟು ಓವರ್ ಬ್ರಿಜ್ ಬಳಿ ಭಾನುವಾರ ಸಂಜೆ ನಡೆದಿದೆ.
ಪೊಲೀಸ್ ಸಿಬಂದಿ ತಲೆಗೆ ಗಂಭೀರಗಾಯಗಳಾಗಿದ್ದು ಮನಗರದ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಢಿಕ್ಕಿ ಹೊಡೆ ಕಾರು ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಗಾಯಗೊಂಡ ಸಿಬಂದಿಯನ್ನು ಲೋಕೇಶ್ ನಾಯ್ಕ್ ಎಂದು ಗುರುತ್ತಿಸಲಾಗಿದ್ದು ನಾಯ್ಕ್ ಮತ್ತು ಎಎಸ್ಐ ಮಂಜುಳಾ ಹೈವೇ ಪೆಟ್ರೋಲ್ ವಾಹನದಲ್ಲಿ ಗಸ್ತಿನಲ್ಲಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ.

ತೊಕ್ಕೊಟ್ಟಿನಿಂದ ಉಳ್ಳಾಲ ಕಡೆಗೆ ವೇಗವಾಗಿ ಹೋಗುತ್ತಿದ್ದ ಸ್ವಿಫ್ಟ್ ಕಾರನ್ನ ಲೋಕೇಶ್ ಅವರು ತಪಾಸಣೆಗಾಗಿ ತಡೆದು ನಿಲ್ಲಿಸು ಯತ್ನ ಮಾಡಿದಾಗ ಈ ದುರ್ಘಟನೆ ನಡೆದಿದೆ. ಬದಿಗೆ ಬಂದಿದ್ದ ಕಾರು ಏಕಾಏಕಿ ಲೋಕೇಶ್ ನನ್ನು ಹೊಡೆದುರುಳಿಸಿ ಪರಾರಿಯಾಗಿದೆ.
ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದು , ಪರಾರಿಯಾಗಿದ್ದ ಕಾರಿನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ..