LATEST NEWS
969 ವಿಮಾನ ಹಾರಾಟ ವಿಶ್ವ ದಾಖಲೆ ನಿರ್ಮಿಸಿದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
969 ವಿಮಾನ ಹಾರಾಟ ವಿಶ್ವ ದಾಖಲೆ ನಿರ್ಮಿಸಿದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮುಂಬಯಿ ನವೆಂಬರ್ 26: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಬಾರಿ ಜಾಗತಿಕ ದಾಖಲೆಯನ್ನು ಮಾಡಿ ಇತಿಹಾಸ ನಿರ್ಮಿಸಿದೆ. ನವೆಂಬರ್ 24 ರಂದು ಇಪ್ಪತ್ತನಾಲ್ಕು ಗಂಟೆಗಳಲ್ಲಿ 969 ವಿಮಾನಯಾನಗಳನ್ನು ನಿರ್ವಹಿಸಿದ ಕೀರ್ತಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂದಿದೆ.
ಕೇವಲ ಒಂದೇ ವಿಮಾನ ನಿಲ್ದಾಣವನ್ನು ಉಪಯೋಗಿಸಿ 65 ಸೆಕೆಂಡುಗಳ ಅಂತರದಲ್ಲಿ 969 ವಿಮಾನಗಳನ್ನು ನಿರ್ವಹಿಸುವ ಮೂಲಕ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಾಖಲೆಯನ್ನು ನಿರ್ಮಿಸಿದೆ . ವಿಶ್ವದ ದೊಡ್ಡ ನಗರಗಳಾದ ನ್ಯೂಯಾರ್ಕ್ ಲಂಡನ್ ದುಬೈ ಹಾಗೂ ದಿಲ್ಲಿ ವಿಮಾನ ನಿಲ್ದಾಣಗಳಲ್ಲಿ ಎರಡೆರಡು ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಮುಂಬಯಿಯಲ್ಲಿ ಕೇವಲ ಒಂದೇ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುತ್ತಿದೆ ಮುಂಬಯಿ ವಿಮಾನ ನಿಲ್ದಾಣದ ಮುಲಕ ದಿನಂಪ್ರತಿ ಸುಮಾರು 900 ವಿಮಾನಗಳು ದಿನಂಪ್ರತಿ ಹಾರಾಟ ನಡೆಸುತ್ತಿವೆ.