LATEST NEWS
8ನೇ ದಿನಕ್ಕೆ ಕಾಲಿರಿಸಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಧರಣಿ

8ನೇ ದಿನಕ್ಕೆ ಕಾಲಿರಿಸಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಧರಣಿ
ಮಂಗಳೂರು ಅಕ್ಟೋಬರ್ 29: ಜನತೆಯ ಸಹನೆಯನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು. ಶಾಂತಿಯುತ ಧರಣಿಗೆ ಬೆಲೆ ಸಿಗದಿದ್ದಾಗ ಹೋರಾಟದ ದಾರಿಯನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ಸುಂಕ ಸಂಗ್ರಹ ಗುತ್ತಿಗೆ ನವೀಕರಣ ವಿರೋಧಿಸಿ ನಡೆಯುತ್ತಿರುವ ಎಂಟನೇ ದಿನ ಪೂರೈಸಿದೆ. ಸುರತ್ಕಲ್ ಗೇಟ್ ವಿರುದ್ದ ನಡೆಯುತ್ತಿರುವ ಧರಣೆ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿರಿಸಿದ್ದು, ಇಂದು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ನೀಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸುರತ್ಕಲ್ ಟೋಲ್ ಗೇಟ್ ವಿರುಧ್ದದ ಜನರ ಹೋರಾಟ ಇಂದು ನಿನ್ನೆಯದಲ್ಲ.

ಈವರೆಗೂ ಬೇಡಿಕೆ ಈಡೇರದಿರುವುದು ಸಂಸದರು ಜನರ ಭಾವನೆಗಳನ್ನು ನಿರ್ಲಕ್ಷಿಸುತ್ತಿರುವುದನ್ನು ಎತ್ತಿತೋರಿಸುತ್ತದೆ. ಈಗಲೂ ಬೇಡಿಕೆ ಈಡೇರದಿದ್ದರೆ ಜನತೆಯೇ ಟೋಲ್ ಗೇಟ್ ನಿಗ್ರಹಕ್ಕೆ ಮುಂದಾಗಬೇಕು ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.
ಹೋರಾಟ ಸಮಿತಿಯ ಪ್ರಮುಖ ವೈ ರಾಘವೇಂದ್ರ ರಾವ್ ಮಾತನಾಡುತ್ತಾ, ಸಂಸದ ನಳಿನ್ ಕುಮಾರ್ ಕಟೀಲ್ ಜನತೆಯ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಪ್ರತಿಭಟನಾ ನಿರತರನ್ನು ಎದುರಿಸುವ ಧೈರ್ಯ ಸಾಲದೆ ದಿಕ್ಕು ತಪ್ಪಿಸುವ ಹೇಳಿಕೆ ನೀಡಿ ಬಚಾವ್ ಆಗಲು ನೋಡುತ್ತಿದ್ದಾರೆ ಎಂದರು.