LATEST NEWS
ಅಹಮದಾಬಾದ್ – ಶಾಲೆಯಲ್ಲೇ ಹೃದಯಾಘಾತಕ್ಕೆ ಬಲಿಯಾದ 8 ವರ್ಷದ ಬಾಲಕಿ
ಅಹಮದಾಬಾದ್ ಜನವರಿ 11: ಇತ್ತೀಚಿನ ದಿನಗಳಲ್ಲಿ ಯುವಜನತೆ ಹೃದಯಾಘಾತದಿಂದ ಸಾವನಪ್ಪುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಅದರ ನಡುವೆ ಇದೀಗ ಸಣ್ಣ ಪ್ರಾಯದ ಮಕ್ಕಳಲ್ಲೂ ಹೃದಯಾಘಾತ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಶಾಲಾ ಬಾಲಕಿ ಸಾವನಪ್ಪಿದ ಘಟನೆ ನಡುವೆ ಇದೀಗ ಗುಜರಾತ್ ನ ಅಹಮದಾಬಾದ್ ನಲ್ಲೂ 8 ವರ್ಷದ ಶಾಲಾ ಬಾಲಕಿಯೊಬ್ಬಳು ಶಾಲೆಯಲ್ಲೇ ಹೃದಯಾಘಾತದಿಂದ ಸಾವನಪ್ಪಿದ್ದಾಳೆ.
ಗುಜರಾತ್‌ನ ಅಹಮದಾಬಾದ್‌ನ ಜಾಬರ್ ಶಾಲೆಯಲ್ಲಿ ಎಂಟು ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಶುಕ್ರವಾರ ಬೆಳಗ್ಗೆ 7:30ಕ್ಕೆ ಬಾಲಕಿ ಶಾಲೆಗೆ ಬಂದಿದ್ದಾಳೆ. ಅವಳು ತನ್ನ ತರಗತಿಯ ಕಡೆಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅವಳಿಗೆ ಎದೆನೋವು ಪ್ರಾರಂಭವಾಯಿತು ಮತ್ತು ಕಾರಿಡಾರ್‌ನಲ್ಲಿನ ಬೆಂಚಿನ ಮೇಲೆ ಕುಳಿತಳು. ಈ ವೇಳೆ ಬಾಲಕಿಗೆ ಹೃದಯಾಘಾತವಾಗಿದ್ದು, ನಂತರ ಆಕೆ ಬೆಂಚ್‌ನಿಂದ ಕೆಳಗೆ ಬಿದ್ದಿದ್ದಾಳೆ. ಶಾಲೆಯ ಆಡಳಿತ ಮಂಡಳಿ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು.
ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದಗ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಬಾಲಕಿ ಹೇಗೆ ಸಂಕಟದಿಂದ ಸಾವನ್ನಪ್ಪಿದ್ದಾಳೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.
Gujrat | आठ वर्षाच्या मुलीचा हृदयविकाराच्या झटक्याने मृत्यू | NDTV मराठी#gujrat #heartattack #ndtvmarathi pic.twitter.com/wvtKjC2tOL
— NDTV Marathi (@NDTVMarathi) January 11, 2025