LATEST NEWS
ಗದ್ದೆಗಿಳಿದು ಮಣ್ಣಿನ ಮಗನಾದ 8 ವರ್ಷದ ಪುಟ್ಟ ಬಾಲಕ

ಗದ್ದೆಗಿಳಿದು ಮಣ್ಣಿನ ಮಗನಾದ 8 ವರ್ಷದ ಪುಟ್ಟ ಬಾಲಕ
ಉಡುಪಿ ಜುಲೈ 4: – ಚಿಕ್ಕಮಕ್ಕಳು ಮನೆಯಲ್ಲಿ ಟಿವಿಯಲ್ಲಿ ಕಾರ್ಟೂನ್ ನೋಡುತ್ತಾ ಇಲ್ಲವೆ ತಂದೆ ತಾಯಿಯ ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕಾಲಕಳೆಯೋ ಇಂದಿನ ದಿನಗಳಲ್ಲಿ ಉಡುಪಿಯ ಪುಟ್ಟ ಬಾಲಕನೋಬ್ಬ ಗದ್ದೆಗೆ ಇಳಿದು ನೇಗಿಲು ಹಿಡಿದು ಉಳುಮೆ ಮಾಡುತ್ತಾ ಇದ್ದಾನೆ. ಈ ಪುಟಾಣಿ ಬಾಲಕ ಕೃಷಿ ಪ್ರೀತಿಯ ಕುರಿತು ಒಂದು ವರದಿ.
ಆತ ಇನ್ನೂ ಎಂಟರ ಹರೆಯದ ಪುಟ್ಟ ಪೋರ. ಉಡುಪಿಯ ಕೊಡವೂರು ಗ್ರಾಮದ ಈ ಪೋರನ ಹೆಸರು ರಿತ್ವಿಕ್.. ಮಲ್ಪೆಯ ಫ್ಲವರ್ ಆಫ್ ಪ್ಯಾರಡೈಸ್ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿ.. ಗಣೇಶ್ ಹಾಗೂ ಪುಷ್ಪ ದಂಪತಿಯ ಪುತ್ರ ಈ ರಿತ್ವಿಕ್ ಗೆ ಬಾಲ್ಯದಿಂದಲೇ ಕೃಷಿ ಚಟುವಟಿಕೆ ಮೇಲೆ ವಿಶೇಷ ಆಸಕ್ತಿ.

ಹಿರಿಯರು ಗದ್ದೆಗೆ ಇಳಿದು ಉಳುಮೆ ಮಾಡ್ತಿದ್ರೆ ತಾನೂ ಅವರ ಜೊತೆ ಉಳುಮೆ ಮಾಡ್ತಾನೆ ಮಾತ್ರವಲ್ಲ, ತನಗಿಂತ ಸಾವಿರ ಪಟ್ಟು ಬಲಶಾಲಿಯಾದ ಕೋಣಗಳನ್ನು ಪಳಗಿಸೋದಕ್ಕೆ ಈ ಬಾಲಕ ಮುಂದಾಗ್ತಾನೆ.. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ರಿತ್ವಿಕ್ ಕೂಡಾ ಮನೆಯವರನ್ನು ಅನುಸರಿಸುತ್ತಾನೆ.
ಮನೆ ಮಂದಿ ಬೇಡಾ ಅಂದ್ರೂ ತಾನೇ ಗದ್ದೆಗೆ ಇಳಿತಾನೆ, ಉಳುಮೆ ಮಾಡ್ತಾನೆ, ಜೊತೆಗೆ ಹಾರೆ ಹಿಡಿದು ಕೆಲಸಾನೂ ಮಾಡ್ತಾನೆ.. ಒಟ್ಟಿನಲ್ಲಿ ರಿತ್ವಿಕ್ ನಂತಹ ಅದೆಷ್ಟೋ ಪುಟಾಣಿಗಳು ಇಂದು ಕೈಯಲ್ಲಿ ಟಿವಿ ರಿಮೋಟ್ ಹಿಡಿಬೇಕಾದ್ರೆ, ರಿತ್ವಿಕ್ ಮಾತ್ರ ತನ್ನ ರಜೆ ಸಮಯದಲ್ಲಿ ನೇಗಿಲು ಹಿಡಿದು, ಸಣ್ಣ ವಯಸ್ಸಲ್ಲೇ ಮಣ್ಣಿನ ಮಗನಾಗೋ ಕನಸು ಕಂಡಂತಿದೆ.
ಅಂದ ಹಾಗೆ ಕಳೆದ ಭಾನುವಾರ ರಜಾದಿನದಂದು ರಿತ್ವಿಕ್ ತಮ್ಮ ಮನೆಗೆ ಸೇರಿದ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ತೆಗೆಯಲಾದ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪುಟಾಣಿಯ ಕೃಷಿ ಪ್ರೇಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ..