Connect with us

    UDUPI

    8 ಲಕ್ಷ ವಿದ್ಯಾರ್ಥಿಗಳು ರಕ್ತದಾನಕ್ಕೆ ರೆಡಿ : ಬಸ್ರೂರು ರಾಜೀವ್ ಶೆಟ್ಟಿ

    ಉಡುಪಿ,ಆಗಸ್ಟ್ 21: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ರಕ್ತ ನಿಧಿ ಕೇಂದ್ರ, ಉಜ್ವಲ್ ಡೆವಲಪರ್ಸ್, ಲಯನ್ಸ್ ಕ್ಲಬ್ ಪರ್ಕಳ ಮತ್ತು ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಪುರಭವನ, ಅಜ್ಜರಕಾಡಿನಲ್ಲಿ ಏರ್ಪಡಿಸಲಾಗಿದ್ದು,ಉದ್ಯಮಿ ಪುರುಷೋತ್ತಮ ಶೆಟ್ಟಿಯವರು ಉದ್ಟಾಟಿಸಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು ಮಾತನಾಡಿ ವಿಶ್ವದಾದ್ಯಂತ 191 ರಾಷ್ಟ್ರಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ 7 ಮೂಲತತ್ವಗಳನ್ನು ಅಳವಡಿಸಿಕೊಂಡು ಮಾನವ ಸೇವೆಯನ್ನು ನೀಡುತ್ತಾ ಬಂದಿದೆ. ಅವುಗಳಲ್ಲಿ ಮುಖ್ಯವಾಗಿ ರಕ್ತದಾನದ ಮಹತ್ವದ ಬಗ್ಗೆ ಮತ್ತು ಯುವ ರೆಡ್ ಕ್ರಾಸ್ ಘಟಕದ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ಮನವರಿಕೆ ಮಾಡಿಸಿದರು. ಕರ್ನಾಟಕ ರಾಜ್ಯದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಈಗಾಗಲೇ 8 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯುವ ರೆಡ್ ಕ್ರಾಸ್ ಘಟಕದಲ್ಲಿ ನೋಂದಾವಣೆ ಮಾಡಲಾಗಿದ್ದು, ನಮ್ಮ ಜನ್ಮ ಸಾರ್ಥಕವಾಗಬೇಕಾದರೆ ನಾವು ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಬದುಕನ್ನು ಮುಡುಪಾಗಿ ಇಡಬೇಕು. ಇದು ರಕ್ತದಾನ ಮಾಡುವ ಮೂಲಕ ಮಾತ್ರ ಸಾಧ್ಯ. ರಕ್ತದಾನದ ಮೂಲಕ ವಿದ್ಯಾರ್ಥಿಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೆ ಒಂದು ಬಾರಿ ನೀಡಿದ ರಕ್ತದಿಂದ 3 ಜನರ ಅಮೂಲ್ಯವಾದ ಜೀವವನ್ನು ಉಳಿಸಬಹುದು ಎಂದು ಹೇಳಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
    ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಶಾಖೆಯ ಸಭಾಪತಿ ಎಸ್ ಜಯಕರ್ ಶೆಟ್ಟಿ, ಮಾತನಾಡಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಅದರಲ್ಲೂ ಮುಖ್ಯವಾಗಿ ಗಾಯಗಳಿಂದ ನರಳುವ ಸೈನಿಕರ, ಸುನಾಮಿ, ಭೂಕಂಪ, ನೆರೆ, ಅಪಘಾತ ಸಂದರ್ಭಗಳಲ್ಲಿ ರೆಡ್ ಕ್ರಾಸ್ ಸ್ವಯಂ ಸೇವಕರ ಕರ್ತವ್ಯ ಮತ್ತು ಧ್ಯೇಯವಾಗಿದೆ. ಅಲ್ಲದೆ ರೆಡ್ ಕ್ರಾಸ್ ಕಾರ್ಯಕ್ರಮಗಳಲ್ಲಿ ಕೈಜೋಡಿಸುವುದು ಯುವ ರೆಡ್ ಕ್ರಾಸ್ ಘಟಕದ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ರಕ್ತದಾನ, ನೇತ್ರದಾನ ಮಾಡುವ ಮೂಲಕ ಜೀವನವನ್ನು ರೂಪಿಸಿಕೊಳ್ಳಬೇಕು. ರಕ್ತನಿಧಿ ಕೇಂದ್ರ, ಕುಂದಾಪುರವು ಕಳೆದ ಎರಡುವರೆ ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ತಲ್ಲೂರು ಶಿವರಾಮ ಶೆಟ್ಟಿ, ಯುವರೆಡ್ ಕ್ರಾಸ್ ಚಯರ್ ಮ್ಯಾನ್, ಪರ್ಕಳ ಲಯನ್ಸ್ ಕ್ಲಬ್‍ನ ಅಧ್ಯಕ್ಷರು ಲಯನ್. ಹರೀಶ್ ಮಡಿವಾಳ, ಡಾ. ಜಿ. ಶಂಕರ್ ಕಾಲೇಜಿನ ಪ್ರಾಂಶುಪಾಲರಾದ ಭಾಸ್ಕರ ಶೆಟ್ಟಿ, ರೋಶನ್ ಶೆಟ್ಟಿ, ಮಾನ್ಯ ಉಪನಿರ್ದೇಶಕರು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶೋಭಾ, ಯುವ ರೆಡ್ ಕ್ರಾಸ್ ಕೋ-ಆರ್ಡಿನೇಟರ್, ಎನ್ ಎಸ್ ಎಸ್ ರಾಜ್ಯ ಸಂಪರ್ಕಧಿಕಾರಿಗಳಾದ ಗಣನಾಥ್ ಶೆಟ್ಟಿ, ಪದಾಧಿಕಾರಿಗಳು, ರೆಡ್ ಕ್ರಾಸ್ ಪದಾಧಿಕಾರಿಗಳು, ಮತ್ತು ಡಾ. ಜಿ. ಶಂಕರ್ ಕಾಲೇಜಿನ ಉಪನ್ಯಾಸಕರು ಮತ್ತು ಮಹಿಳಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು, 99 ಯೂನಿಟ್ ರಕ್ತವನ್ನು ರೆಡ್ ಕ್ರಾಸ್ ಕುಂದಾಪುರ ರಕ್ತನಿಧಿಗೆ ನೀಡಲಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *