ವಿಧಾನಸೌಧ ಕಟ್ಟಡಕ್ಕೆ 60 ವರ್ಷ – ಜಂಟಿ ಅಧಿವೇಶನಕ್ಕೆ ರಾಷ್ಟ್ರಪತಿಗಳಿಗೆ ಆಹ್ವಾನ

ವಿಧಾನಸೌಧ ಕಟ್ಟಡಕ್ಕೆ 60 ವರ್ಷ – ಜಂಟಿ ಅಧಿವೇಶನಕ್ಕೆ ರಾಷ್ಟ್ರಪತಿಗಳಿಗೆ ಆಹ್ವಾನ
ದೆಹಲಿ ಅಕ್ಟೋಬರ್ 9: ಕರ್ನಾಟಕ ವಿಧಾನಸೌಧದ ಕಟ್ಟಡಕ್ಕೆ 60 ವರ್ಷಗಳು ಪೂರ್ತಿಗೊಂಡಿದ್ದು . ಈ ಹಿನ್ನಲೆಯಲ್ಲಿ ಇದೇ ತಿಂಗಳಲ್ಲಿ ಜಂಟಿ ಅದಿವೇಶನ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಸಂದರ್ಭದಲ್ಲಿ ನಡೆಯುವ ಜಂಟಿ ಅಧಿವೇಶನವನ್ನು ಉದ್ಘಾಟನೆಯನ್ನು ಮಾಡಲು ರಾಷ್ಟ್ರದ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದರವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ,
ಈ ಹಿನ್ನಲೆಯಲ್ಲಿ ವಿಧಾನಸಭೆಯ ಸ್ಪೀಕರ್ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ತಿನ ಸಭಾಪತಿ ಎಚ್ ಡಿ. ಶಂಕರ್ ಮೂರ್ತಿ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜಾ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣೀಕ್ ಇವರುಗಳು ರಾಷ್ಟ್ರಪತಿ ರಾಮನಾಥ ಕೋವಿಂದರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡಿದರು.


Continue Reading