Connect with us

    LATEST NEWS

    60 ವರ್ಷದ ಲವ್: 80ನೇ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳ ಎದುರು ಮದುವೆಯಾದ ಜೋಡಿ!

    ವದೆಹಲಿ:  ಇಲ್ಲೊಂದು ಜೋಡಿ ಪ್ರೀತಿಗೂ ಮದುವೆಗೂ ವಯಸ್ಸಿಗೂ ಸಂಬಂಧವಿಲ್ಲ ಎಂದು ಸಾಬೀತುಪಡಿಸಿದೆ. ಮಕ್ಕಳು ತಮ್ಮ ಒಂಟಿ ತಾಯಿ ಅಥವಾ ತಂದೆಗೆ ಮರುಮದುವೆ ಮಾಡುತ್ತಾರೆ. ಆದರೆ 60 ವರ್ಷಗಳಿಂದ ಪ್ರೀತಿಯಲ್ಲಿದ್ದು, ಜೊತೆಗೆ ಇದ್ದ ಈ ಜೋಡಿ ವೃದ್ಧಾಪ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    80 ವರ್ಷದ ವ್ಯಕ್ತಿಯೊಬ್ಬ ತನ್ನ 70 ವರ್ಷದ ಗೆಳತಿಯನ್ನು ಮದುವೆಯಾಗಿದ್ದಾನೆ. ಟ್ವೀಸ್ಟ್​​ ಏನಪ್ಪಾ ಅಂದ್ರೆ ಈ ಜೋಡಿಗೆ ಇಷ್ಟು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸುತ್ತಿತ್ತು. ಇವರಿಗೆ ಮಕ್ಕಳು ಕೂಡಾ ಇದ್ದಾರೆ. ಆದರೆ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಈ ಮದುವೆಯ ವಿಡಿಯೋ ವೈರಲ್ ಆಗಿದೆ. ಮಹಬೂಬಾಬಾದ್ ಜಿಲ್ಲೆಯಲ್ಲಿ ಈ ಅಪರೂಪದ ಮದುವೆ ನಡೆದಿದೆ.

    ಸಮೀದಾ ನಾಯ್ಕ (80) ಮತ್ತು ಗೋಗುಲೋತ್ ಲಾಲಿ (70) ದಂಪತಿ ಈ ಹಿಂದೆ ಗಂಧರ್ವ ಮದುವೆಯಾಗಿದ್ದರು. ಅಂದರೆ ಹಾರಗಳನ್ನು ಮಾತ್ರ ಬದಲಾಯಿಸಲಾಗಿದೆ. ಆ ಕಾಲದಲ್ಲಿ ತಾಳಿ ಕಟ್ಟುವ ಪದ್ಧತಿ ಇರಲಿಲ್ಲ. ಹಾಗೆ ಬದುಕುತ್ತಿರುವಾಗ ಅವರಿಗೆ ನಾಲ್ವರು ಗಂಡು ಮತ್ತು ಒಬ್ಬಳು ಮಗಳು ಇದ್ದಾರೆ.

    ಈ ಜೋಡಿ ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿದ್ದರು. ಮಕ್ಕಳಿದ್ದರು. ಕುಟುಂಬ ಇತ್ತು ಆದ್ರೆ ಈ ಸಂಬಂಧ ಕ್ಷೀಣಿಸಲಿಲ್ಲ. ತಾಯಿ ಕೊರಳಲ್ಲಿ ಮಂಗಳಸೂತ್ರ ಇರಲಿಲ್ಲ ಈ ನೋವನ್ನು ಅರ್ಥಮಾಡಿಕೊಂಡ ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು… ಕೊನೆಗೂ ಇದೇ ತಿಂಗಳ 28ರಂದು ವೃದ್ಧ ದಂಪತಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ್ದಾರೆ. .

    Share Information
    Advertisement
    Click to comment

    Leave a Reply

    Your email address will not be published. Required fields are marked *