DAKSHINA KANNADA
ಲೋಕಸಮರ@24 : ದ.ಕ. ಜಿಲ್ಲೆಯಲ್ಲಿ 5,878 ಹಿರಿಯ ಮತದಾರರಿಂದ ಮನೆಯಿಂದಲೇ ಮತದಾನ..!

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 5,878 ಹಿರಿಯ ಮತದಾರರಿಂದ ಮತ ಚಲಾವಣೆಯಾಗಿದೆ.
ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರಿಗೆ ಮತ್ತು ಶೇ.40ಕ್ಕೂ ಹೆಚ್ಚು ಅಂಗವಿಕಲತೆ ಹೊಂದಿರುವ ದಿವ್ಯಾಂಗರಿಗೆ ಮನೆಯಿಂದಲೇ ಮತ ಹಾಕಲು ನೀಡಿದ ಅವಕಾಶ ಮಾಡಿಕೊಟ್ಟಿತ್ತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ಸೋಮವಾರದಿಂದ ಬುಧವಾರದವೆರೆಗೆ ಮನೆಮನೆಗೆ ತೆರಳಿ ಅರ್ಹರ ಮತದಾನಕ್ಕೆ ವ್ಯವಸ್ಥೆ ಮಾಡಿದ್ದರು. ಜಿಲ್ಲೆಯಲ್ಲಿ 85 ಕ್ಕೂ ಹೆಚ್ಚು ವಯಸ್ಸಾದ 6,053 ಮತದಾರರು ಮನೆಯಿಂದಲೇ ಮತದಾನಕ್ಕೆ ಹೆಸರು ನೋಂದಾಯಿಸಿ ಕೊಂಡಿದ್ದರು. ಈವರೆಗೆ ಬಂದ ಮಾಹಿತಿಯಂತೆ 5,878 ಮತದಾರರು ಹಕ್ಕು ಚಲಾಯಿಸಿದ್ದಾರೆ. ಅದಲ್ಲದೆ ಮನೆಯಿಂದಲೇ ಮತದಾನಕ್ಕೆ ಹೆಸರು ನೋಂದಾಯಿಸಿದ್ದ 1,957 ವಿಕಲಚೇತನ ಮತದಾರರ ಪೈಕಿ ಈವರೆಗೆ 1,929 ಮಂದಿ ಮತ ಚಲಾಯಿಸಿರುತ್ತಾರೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
