DAKSHINA KANNADA
ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ ತಮ್ಮಲಕ್ಷಣ ರವರ “ತುಳು ಬೆಳ್ಳಿತೆರೆಯ ಸುವರ್ಣಯಾನ” ಕೃತಿ ಬಿಡುಗಡೆ

ಮಂಗಳೂರು, ಫೆಬ್ರವರಿ 28: ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ ತಮ್ಮಲಕ್ಷಣ ರವರ “ತುಳು ಬೆಳ್ಳಿತೆರೆಯ ಸುವರ್ಣಯಾನ” ಕೃತಿ ನಗರದ ಪುರಭವನದಲ್ಲಿ ಸೋಮವಾರ ಬಿಡುಗಡೆ ಗೊಂಡಿದೆ.
ತುಳು ಚಿತ್ರರಂಗ ನಡೆದು ಬಂದ ಹಾದಿ, 50 ವರ್ಷಗಳಿಂದ ತುಳು ಚಿತ್ರರಂಗದಲ್ಲಿ ಬಂದಂತಹ ಚಿತ್ರಗಳ ಸಮಗ್ರ ಮಾಹಿತಿಯನ್ನು ಹೊಂದಿರುವ ತಮ್ಮಲಕ್ಷಣ ರವರ “ತುಳು ಬೆಳ್ಳಿತೆರೆಯ ಸುವರ್ಣಯಾನ” ಪುಸ್ತಕ ಸೋಮವಾರ ನಗರದ ಪುರಭವನದಲ್ಲಿ ಪ್ರೊಫೆಸರ್ ಬಿ ಎ ವಿವೇಕ್ ರೈ ಹಿರಿಯ ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿಗಳು ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರೊ ಪಿ. ಸುಬ್ರಹ್ಮಣ್ಯ ಎಡಪಡಿತಯ , ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ, ಡಾ. ಎಂ ಮೋಹನ್ ಅಲ್ವಾ ಅಧ್ಯಕ್ಷರು ಅಲ್ವಾ ಶಿಕ್ಷಣ ಪ್ರತಿಷ್ಠಾನ, ಮಹಾಬಲೇಶ್ವರ ಎಂಎಸ್, ಆಡಳಿತ ನಿರ್ದೇಶಕರು ಕರ್ನಾಟಕ ಬ್ಯಾಂಕ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತುಳು ಚಿತ್ರರಂಗದ ಉನ್ನತಿಗೆ ಶ್ರಮಿಸಿದ ಹಿರಿಯ ಸಾಧಕರಾದ ಟಿಎ ಶ್ರೀನಿವಾಸ್ , ಸಂಜೀವ ದಂಡಕೇರಿ, ರಿಚರ್ಡ್ ಕ್ಯಾಸ್ಟಲಿನೋ, ರಾಮ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕೃತಿ ಬಿಡುಗಡೆಗು ಮುನ್ನ 50 ವರ್ಷಗಳಲ್ಲಿ ತೆರೆಕಂಡ ತುಳು ಚಿತ್ರಗಳ ಕಿರು ಸಾಕ್ಷ ಚಿತ್ರ ತುಳು ಚಿತ್ರಮಾಲ ಪ್ರದರ್ಶನ ನಡೆಯಿತು.