LATEST NEWS
ಮಂಗಳೂರಿನಲ್ಲಿ 5 ಓಮಿಕ್ರಾನ್ ಪ್ರಕರಣ ದಾಖಲು

ಮಂಗಳೂರು ಡಿಸೆಂಬರ್ 18: ಕರಾವಳಿಗೆ ಕೊರೊನಾದ ರೂಪಾಂತರ ತಳಿ ಓಮಿಕ್ರಾನ್ ಎಂಟ್ರಿಯಾಗಿದ್ದು, ಮಂಗಳೂರಿನ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳಲ್ಲಿ ಐದು ಮಂದಿಗೆ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳಲ್ಲಿ ಒಂದು ವಿಧ್ಯಾಸಂಸ್ಥೆಯಲ್ಲಿ ಪತ್ತೆಯಾದ 14 ಕೊರೊನಾ ಪ್ರಕರಣದಲ್ಲಿ 4 ಓಮಿಕ್ರಾನ್ ಆಗಿದ್ದು, ಇನ್ನೊಂದು ಸಂಸ್ಥೆ 19 ಕೊರೊನಾ ಪ್ರಕರಣದಲ್ಲಿ ಒಂದು ಓಮಿಕ್ರಾನ್ ಆಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
