DAKSHINA KANNADA
ನಾಲ್ಕು ದಶಕಗಳ ಹಿಂದಿನ ಪ್ರಕರಣದ ಆರೋಪಿಯನ್ನು ಹಿಡಿದ ಪೊಲೀಸರು
ನಾಲ್ಕು ದಶಕಗಳ ಹಿಂದಿನ ಪ್ರಕರಣದ ಆರೋಪಿಯನ್ನು ಹಿಡಿದ ಪೊಲೀಸರು
ಮಂಗಳೂರು ಜುಲೈ 26: ಬರೋಬ್ಬರಿ 44 ವರ್ಷಗಳ ಹಿಂದಿನ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಈಗ ಪೊಲೀಸರು ಅತಿಥಿಯಾಗಿದ್ದಾನೆ, ನಾಲ್ಕು ದಶಕಗಳ ಹಿಂದಿನ ಪ್ರಕರಣವನ್ನು ಭೇಧಿಸುವಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
44 ವರ್ಷಗಳ ಹಿಂದೆ ಅಕ್ರಮವಾಗಿ ಶ್ರೀಗಂಧ ಕಳ್ಳ ಸಾಗಾಟ ಮಾಡಿದ್ದ ಆರೋಪದ ಮೇಲೆ ಪುತ್ತೂರು ಪೊಲೀಸರು ಕೇರಳದ ಕಾಸರಗೋಡು ಚೆಂಗಳ ನಿವಾಸಿ ಅಬ್ಬಾಸ್ ಎಂಬಾತನ್ನು ಬಂಧಿಸಿದ್ದಾರೆ, ಈ ಪ್ರಕರಣ ನಡೆದಿದ್ದು 1974 ರಲ್ಲಿ ಜುಲೈ 15 ರಂದು ಅಬ್ಬಾಸ್ ತನ್ನ ದ್ವಿಚಕ್ರ ವಾಹನದಲ್ಲಿ 7 ಕೆ.ಜಿ ಶ್ರೀಗಂಧ ದ ತಂಡುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಹಿಡಿಯಲು ಬಂದ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.
ಶ್ರೀಗಂಧವನ್ನು ಸಾಗಿಸಲು ಯತ್ನಿಸುತ್ತಿದ್ದಾಗ ವಿಟ್ಲ ಸಮೀಪದ ಬುಡೇರಿಕಟ್ಟೆ ಎಂಬಲ್ಲಿ ಅಂದಿನ ಪೊಲೀಸ್ ಹೆಡ್ ಕಾಸ್ಟೇಬಲ್ ಗಂಗೋಜಿ ರಾವ್ ಅಬ್ಬಾಸ್ ನನ್ನು ತಡೆದು ನಿಲ್ಲಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಅರೋಪಿ ಅಬ್ಬಾಸ್ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ ಎಂದು ಹೇಳಲಾಗಿದೆ.
ಆರೋಪಿ ಅಬ್ಬಾಸ್ ನನ್ನು ಹಿಡಿಯಲು ಪುತ್ತೂರು ಪೊಲೀಸರು ಕಳೆದ ನಾಲ್ಕು ತಿಂಗಳಿಂದ ಬಲೆ ಬೀಸಿದ್ದರು. ಬರೋಬ್ಬರಿ 44 ವರ್ಷದ ಹಿಂದ ಎಸಗಿದ್ದ ಅಪರಾಧಕ್ಕೆ ಅರೋಪಿ ಅಬ್ಬಾಸ್ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.