LATEST NEWS
ಬಿ ಟಿವಿ ಚಾನೆಲ್ ಕ್ಯಾಮರಾಮೆನ್ ಬಲಿ ಪಡೆದ ಡೆಂಗ್ಯೂ ಮಹಾಮಾರಿ

ಬಿ ಟಿವಿ ಚಾನೆಲ್ ಕ್ಯಾಮರಾಮೆನ್ ಬಲಿ ಪಡೆದ ಡೆಂಗ್ಯೂ ಮಹಾಮಾರಿ
ಮಂಗಳೂರು ಜುಲೈ 22: ಡೆಂಗ್ಯೂ ಮಹಾಮಾರಿಗೆ ಬಿ ಟಿವಿ ನ್ಯೂಸ್ ಚ್ಯಾನೆಲ್ ನ ಕ್ಯಾಮರಮ್ಯಾನ್ ನಾಗೇಶ್ ಪಡು ಇಂದು ನಿಧನರಾಗಿದ್ದಾರೆ.
ಬಿಟಿವಿ ಚಾನೆಲ್ ನ ವಿಡಿಯೋ ಜರ್ನಲಿಸ್ಟ್ ಹಾಗೂ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ನಾಗೇಶ್ ಪಡು ಡೆಂಗೆ ಜ್ವರದಿಂದ ಬಳಲುತ್ತಿದ್ದು ರವಿವಾರ ರಾತ್ರಿ ನಗರದ ಕೆ ಎಂ ಸಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ರಾಗಿದ್ದಾರೆ. ಮೃತರು ಪತ್ನಿ ಪುತ್ರಿ ಹಾಗೂ ಬಂಧು ಭಾಂದವರನ್ನು ಅಪಾರ ಸಹೋದ್ಯೋಗಿಗಳನ್ನು ಅಗಲಿದ್ದಾರೆ.

ನಾಗೇಶ್ ಪಡು ಕಳೆದ ನಾಲ್ಕು ವರ್ಷ ದಿಂದ ಬಿಟಿವಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಡೆಂಗ್ಯೂ ಜ್ವರ ಇರುವುದು ತಿಳಿದು ಬಂದಿತ್ತು, ಕಳೆದ ಕೆಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 12 ರ ಸುಮಾರಿಗೆ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಮಹಾಮಾರಿ ಮರಣಮೃದಂಗವನ್ನೇ ಬಾರಿಸುತ್ತಿದೆ. ಜಿಲ್ಲೆಯಲ್ಲಿ ತೀವ್ರಗೊಂಡಿರುವ ಡೆಂಗ್ಯೂ ಜ್ವರದ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಾಚರಣಯ ಹೊರತಾಗಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹತೋಟಿಗೆ ಬಂದಿಲ್ಲ.