LATEST NEWS
ಜಿಲ್ಲೆಯಲ್ಲಿ ಮತ್ತೆ ಇಬ್ಬರು ಕೊರೊನಾಗೆ ಬಲಿ; 22ಕ್ಕೆ ಏರಿದ ಮೃತರ ಸಂಖ್ಯೆ
ಮಂಗಳೂರು ಜುಲೈ 04 :ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಇಂದು ಮತ್ತೆ ಮಾರಕ ಕೊರೋನಾ ಇಬ್ಬರು ಬಲಿ ಪಡೆದಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ ಮೂವರು ಕೊರೋನಾದಿಂದ ಬಲಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಅಶೋಕನಗರದ 60 ವರ್ಷದ ವ್ಯಕ್ತಿ ಹಾಗೂ ಕುಳೂರು ಗುಡ್ಡೆಯಂಗಡಿ ನಿವಾಸಿ 52 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇಂದು ಮೃತಪಟ್ಟ ಇಬ್ಬರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಸುಳ್ಯ ತಾಲೂಕಿನ ಕೆರೆಮೂಲೆ ನಿವಾಸಿ ವೃದ್ದೆ ಕೊರೋನಾಗೆ ಬಲಿಯಾಗಿದ್ದರು, ಇದೀಗ ಮತ್ತೆ ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಇಂದು ಒಟ್ಟು ಮೂವರು ಕೊರೊನಾಗ ಪ್ರಾಣ ಕಳೆದುಕೊಂಡಿದ್ದಾರೆ. ದ.ಕ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 22ಕ್ಕೆ ಏರಿಕೆ.