UDUPI
ಬಸ್ಸಿನಲ್ಲಿ ಬರುತ್ತಿದ್ದಾಗಲೇ ಹೃದಯಾಘಾತದಿಂದ ಸಾವನಪ್ಪಿದ 25 ವರ್ಷದ ಯುವಕ

ಮಂಗಳೂರು, ಜೂನ್ 16 : ಬೆಂಗಳೂರಿನಿಂದ ಉಡುಪಿಗೆ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿ ಯುವಕನೊಬ್ಬ ಬಸ್ಸಿನಲ್ಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ಐಟಿ ಉದ್ಯೋಗದಲ್ಲಿದ್ದ ಕೋಟೇಶ್ವರ ಕುಂಬ್ರಿ ನಿವಾಸಿ ಚೈತನ್ಯ (25) ಮೃತ ಯುವಕ.
ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಬಸ್ ಇಂದು ಬೆಳಗ್ಗೆ 6.30ಕ್ಕೆ ಕುಂದಾಪುರದ ಕೋಟೇಶ್ವರ ತಲುಪಿತ್ತು. ಅದಕ್ಕೂ ಮುನ್ನ ಮನೆಯವರಿಗೆ ಕರೆ ಮಾಡಿದ್ದ ಚೈತನ್ಯ ಬಸ್ ಬಾರ್ಕೂರು ತಲುಪಿದ್ದನ್ನು ಹೇಳಿದ್ದರು. ಬಸ್ ಕೋಟೇಶ್ವರ ತಲುಪಿದಾಗ ನಿರ್ವಾಹಕನಿಗೆ ಅನುಮಾನ ಬಂದು ಮಲಗಿದ್ದ ಯುವಕನನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ, ಅಸ್ವಸ್ಥಗೊಂಡಿದ್ದ ಯುವಕನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅದಾಗಲೇ ಚೈತನ್ಯ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
